ಬೆಂಗಳೂರು, ಅ.31(DaijiworldNews/AK): ಕಳೆದ ಒಂದು ದಿನದ ಹಿಂದೆಯಷ್ಟೇ ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಸುಳಿವು ನೀಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಇದೀಗ ರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಪಂಚ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಶಕ್ತಿ ಯೋಜನೆಯಲ್ಲೂ ಯಾವುದೇ ಪರಿಷ್ಕರಣೆ ಇಲ್ಲ ಎಂದು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆ ತಿರುಚಲಾಗಿದೆ. ನಮ್ಮ ಸರ್ಕಾರವನ್ನ ಷಡ್ಯಂತ್ರದಿಂದ ಕೆಡವಲು ಯಾರ ಹಣೆಯಲ್ಲೂ ಬರೆದಿಲ್ಲ. ಇನ್ನೂ ಎಂಟೂವರೆ ವರ್ಷ ನಮ್ಮದೇ ಸರ್ಕಾರ ಎಂದು ಕೇಂದ್ರ ಸಚಿವ ಹೆಚ್ಡಿಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ನಾವು ಟಿಕೆಟ್ಗೆ ದುಡ್ಡು ಕೊಡೋಕೆ ರೆಡಿ ಇದ್ದೇವೆ. ಆದರೆ ಬಸ್ ನಲ್ಲಿ ಹಣ ತೆಗೆದುಕೊಳ್ಳುತ್ತಿಲ್ಲ ಅಂತ ನನಗೆ ಹೇಳ್ತಿದ್ದಾರೆ. ಈ ಬಗ್ಗೆ ನಾವು ಕೂತು ಚರ್ಚೆ ಮಾಡ್ತೀವಿ. ಅನೇಕರು ನಾವು ಟಿಕೆಟ್ ಹಣ ಕೊಡೋಕೆ ಸಿದ್ಧ ಅಂತ ಪ್ರಾಮಾಣಿಕವಾಗಿ ಅಭಿಪ್ರಾಯ ಹೇಳ್ತಿದ್ದಾರೆ. ಹೀಗಾಗಿ ನಾವು, ರಾಮಲಿಂಗಾರೆಡ್ಡಿ ಎಲ್ಲಾ ಕೂತು ಈ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ನುಡಿದಿದ್ದರು.