ನವದೆಹಲಿ,ನ.03(DaijiworldNews/TA):ಪೂರ್ಣಿಯಾದ ಲೋಕಸಭೆಯ ಸ್ವತಂತ್ರ ಸಂಸದ ಪಪ್ಪು ಯಾದವ್ಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಹಾರ ಪೊಲೀಸರು ಶನಿವಾರ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಯನ್ನು ಮಹೇಶ್ ಪಾಂಡೆ ಎಂದು ಗುರುತಿಸಲಾಗಿದ್ದು, ದೆಹಲಿಯಲ್ಲಿ ಬಂಧಿಸಲಾಗಿದೆ.
ವಿಚಾರಣೆ ವೇಳೆ ಪಾಂಡೆ ತಪ್ಪೊಪ್ಪಿಕೊಂಡಿದ್ದು, ಆತನಿಗೆ ಯಾವುದೇ ಗ್ಯಾಂಗ್ನೊಂದಿಗೆ ನಂಟು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಯುಎಇಯಲ್ಲಿ ನೆಲೆಸಿರುವ ತನ್ನ ಸಂಬಂಧಿಯ ಸಿಮ್ ಕಾರ್ಡ್ ಬಳಸಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಇತ್ತೀಚೆಗೆ ಸಂಸದ ಪಪ್ಪು ಯಾದವ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ, ದುಬೈ ಸಂಖ್ಯೆಯಿಂದ ತನಗೆ ಕರೆ ಬಂದಿದ್ದು, ಭದ್ರತೆ ಹೆಚ್ಚಿಸುವಂತೆ ಪತ್ರ ಬರೆದಿದ್ದರು.ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದರು.
ಇನ್ನು ವಾಟ್ಸಾಪ್ ಮೂಲಕ ಸಂಸದರನ್ನು ಸಂಪರ್ಕಿಸಿದ್ದು, ಇದಕ್ಕಾಗಿ ಯುಎಇಯಲ್ಲಿ ನೆಲೆಸಿರುವ ಕುಟುಂಬ ಸದಸ್ಯರೊಬ್ಬರ ಸಿಮ್ ಕಾರ್ಡ್ ಬಳಸಿದ್ದೆ ಎಂದು ವಿಚಾರಣೆ ವೇಳೆ ಪಾಂಡೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.