ಮುಂಬೈ, ನ.04(DaijiworldNews/AK): ಉತ್ತರ ಪ್ರದೇಶದ ಸಹರಾನ್ ಪುರ ಜಿಲ್ಲೆಯ ನಸ್ರುಲ್ಲಗಢ ಎಂಬ ಹಳ್ಳಿಯಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದವರು ವಂದನಾ. ಅವಿಭಕ್ತ ಕುಟುಂಬದಲ್ಲಿ ದ್ದ ಹೆಣ್ಣು ಮಗಳಾದ ವಂದನಾ ಓದಿನ ಬಗ್ಗೆ ತಕರಾರು ಹೊಂದಿದ್ದರು. ಆದರೆ ವಂದನಾ ಅವರ ತಂದೆ ಮಾತ್ರ ಮಗಳ ಓದಿನ ಪರ ನಿಂತರು. ತಮ್ಮ ಮಗಳನ್ನು ಮೊರಾದಾಬಾದ್ ನ ಗುರುಕುಲದಲ್ಲಿ ಓದಲು ಕಳುಹಿಸಿದರು.
ನಂತರ ಆಗ್ರಾದ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಎಲ್.ಎಲ್.ಬಿ. ಅಧ್ಯಯನವನ್ನು ಮನೆಯಿಂದಲೇ ಮಾಡಿದರು. ಸಾಮಾನ್ಯ ಕಾಲೇಜಿಗೆ ಹೋಗಲಿಲ್ಲ. ದೂರಶಿಕ್ಷಣದ ಮೂಲಕವೇ ಪದವಿ ಮುಗಿಸಿದರು.
ವಂದನಾ ಅವರು ಭಿವಾನಿಯ ಕನ್ಯಾ ಗುರುಕುಲದಿಂದ ಸಂಸ್ಕೃತದಲ್ಲಿ ಪದವಿ ಪಡೆದರು. ಆಗ್ರಾದ ಬಿಆರ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದಿಂದ ಎಲ್ಎಲ್ಬಿ ಪೂರ್ಣಗೊಳಿಸಿದ್ದಾರೆ. ಕಾನೂನು ಪದವಿ ಮುಗಿದ ನಂತರವೇ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು.
ಮನೆಯಿಂದಲೇ UPSC CSE ಪರೀಕ್ಷೆಗೂ ತಯಾರಿ ನಡೆಸಿದ್ದರು. ಪ್ರತಿದಿನ 10 ರಿಂದ 12 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಕುಟುಂಬವನ್ನು ಎದುರು ಹಾಕಿಕೊಂದು ತಂದೆ ಮತ್ತು ಸಹೋದರ ಅವರಿಗೆ ಸಾಧ್ಯವಾದಷ್ಟು ಬೆಂಬಲ ನೀಡಿದರು.ಹಿಂದಿ ಮಾಧ್ಯಮದ ವಿದ್ಯಾರ್ಥಿನಿ ವಂದನಾ ಸಿಂಗ್ ಚೌಹಾಣ್ ಸ್ವ-ಅಧ್ಯಯನದ ಮೂಲಕ ನಾಗರಿಕ ಸೇವೆಗೆ ತಯಾರಿ ನಡೆಸಿ 24ನೇ ವಯಸ್ಸಿನಲ್ಲಿ 8ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾದರು. 2012 ರ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 8 ನೇ ರ್ಯಾಂಕ್ ಗಳಿಸುವ ಮೂಲಕ IAS ಟಾಪರ್ಗಳಲ್ಲಿ ಒಬ್ಬರಾದ ವಂದವಾ, IAS ಪರೀಕ್ಷೆಯಲ್ಲಿ ಕೇವಲ ಇಂಗ್ಲಿಷ್ ಮಾಧ್ಯಮದ ಅಭ್ಯರ್ಥಿಗಳು ಮಾತ್ರ ಉತ್ತಮ ಸಾಧನೆ ಮಾಡಿ ತೋರಿಸಿದ್ದಾರೆ. ವಂದನಾ ಈಗ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಡಿಎಂ ಆಗಿದ್ದಾರೆ.