ಶ್ರೀನಗರ, ನ.04(DaijiworldNews/AA): ನ್ಯಾಷನಲ್ ಕಾನ್ಫರೆನ್ಸ್ನ ಹಿರಿಯ ನಾಯಕ ಮತ್ತು ಶಾಸಕ ಅಬ್ದುಲ್ ರಹೀಂ ರಾಥರ್(80) ಅವರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಸಿಎಂ ಒಮರ್ ಅಬ್ದುಲ್ಲಾ ಮತ್ತು ಹಂಗಾಮಿ ಸ್ಪೀಕರ್ ಮುಬಾರಕ್ ಗುಲ್ ಅವರು ಹೊಸ ಅಸೆಂಬ್ಲಿ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರನ್ನು ಅಭಿನಂದಿಸಿದರು.
ಅಬ್ದುಲ್ ರಹೀಮ್ ರಾಥರ್ ಅವರು 2002ರಿಂದ 2008ರವರೆಗೆ ವಿರೋಧ ಪಕ್ಷದ ನಾಯಕರೂ ಆಗಿದ್ದರು. ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಒಮರ್ ಅಬ್ದುಲ್ಲಾ ಅವರ ಕಾಂಗ್ರೆಸ್ ಮೈತ್ರಿ (ಎನ್ಸಿ) ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದಾಗ ಈ ಜವಾಬ್ದಾರಿಯನ್ನು ವಹಿಸಿದ್ದರು.
ಸರ್ಕಾರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಪಾಲುದಾರರು ಇಂದು ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಅಬ್ದುಲ್ ರಹೀಂ ರಾಥರ್ ಅವರು 7ನೇ ಬಾರಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.