ಲಕ್ನೋ,ನ.04(DaijiworldNews/AK): ಭಾರತೀಯ ವಾಯುಪಡೆಯ MiG-29 ಫೈಟರ್ ಜೆಟ್ ಪತನಗೊಂಡು ಹೊತ್ತಿ ಉರಿದ ಘಟನೆ ಉತ್ತರ ಪ್ರದೇಶದ ಆಗ್ರಾದ ಸಾಂಗಾ ಗ್ರಾಮದಲ್ಲಿ ನಡೆದಿದೆ. ಸದ್ಯ ಅವಘಡದಲ್ಲಿ ಪೈಲಟ್ ಪ್ರಾಣಪ್ರಾಯದಿಂದ ಪಾರಾಗಿದ್ದಾರೆ.
ಮಿಗ್ -29 ವಿಮಾನವು ತರಬೇತಿಯ ಸಮಯದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಬಳಿಕ ವಿಮಾನ ಪತನಗೊಂಡು ಹೊತ್ತಿ ಉರಿದಿದೆ. ಇಂತಹ ಸಮಯದಲ್ಲೂ ಪೈಲಟ್ ನೆಲದಲ್ಲಿ ಯಾವುದೇ ಜೀವ ಅಥವಾ ಆಸ್ತಿಗೆ ಹಾನಿಯಾಗದಂತೆ ನೋಡಿಕೊಂಡಿದ್ದಾರೆ. ಪೈಲಟ್ ಸೇರಿದಂತೆ ಇಬ್ಬರು ಜೆಟ್ನಿಂದ ಹಾರುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಂಡರು. ವಿಮಾನ ಪತನಕ್ಕೆ ಕಾರಣ ತಿಳಿದುಕೊಳ್ಳಲು ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.
ಮಿಗ್ 29 ವಿಮಾನಗಳನ್ನು 1987 ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿತ್ತು.