ತುಮಕೂರು,ನ.05(DaijiworldNews/TA):ಸಲ್ಮಾನ್ ಖಾನ್ಗೆ ಜೀವಬೆದರಿಕೆ ಪ್ರಕರಣದಲ್ಲಿ ಆರೋಪಿಯೋರ್ವನನ್ನು ತುಮುಕೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ವಿಕ್ರಮ್ ಎಂದು ಗುರುತಿಸಲಾಗಿದೆ. ಆರೋಪಿ, ಸಲ್ಮಾನ್ ಖಾನ್ 5 ಕೋಟಿ ರೂ. ಹಣ ನೀಡಬೇಕು ಮತ್ತು ದೇವಾಲಯಕ್ಕೆ ಬಂದು ಕ್ಷಮೆ ಕೋರಬೇಕು ಎಂದು ಮುಂಬೈ ಪೊಲೀಸರಿಗೆ ಮೆಸೇಜ್ ಕಳುಹಿಸಿದ್ದ ಎನ್ನಲಾಗಿತ್ತು. ಇದೀಗ ಆತ ಅರೆಸ್ಟ್ ಆಗಿದ್ದಾನೆ. ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ಮುಂದುವರೆದಿದೆ.
ಅಕ್ಟೋಬರ್ 12 ರಂದು ದಸರಾ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ಬಾಬಾ ಸಿದ್ದಿಕ್ ಅವರನ್ನು ಅವರ ಮಗ ಹಾಗೂ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಆರೋಪಿಗಳನ್ನು ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.ಇದೇ ಸಮಯದಲ್ಲಿ ಜೀವಬೆದರಿಕೆ ಕೂಡಾ ಹೆಚ್ಚಾಗುತ್ತಿದ್ದು ಸಲ್ಮಾನ್ ಖಾನ್ಗೆ ಹೆಚ್ಚು ಬೆದರಿಕೆ ಸಂದೇಶ ಬರುತ್ತಿದ್ದು ವಿಚಾರಣೆ ನಡೆಯುತ್ತಿದೆ.