ಹುಬ್ಬಳ್ಳಿ, ನ.07(DaijiworldNews/AA): ಸಿದ್ದರಾಮಯ್ಯ ಸರ್ಕಾರ ವಕ್ಫ್ಗೆ ಕುಮ್ಮಕ್ಕು ನೀಡಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಜನಪ್ರಿಯ ನೇತಾರ ಯತ್ನಾಳ್ ಅವರು ವಕ್ಫ್ ವಿರುದ್ಧ ಧ್ವನಿ ಎತ್ತಿ ಧರಣಿ ಆರಂಭ ಮಾಡಿದ್ದಾರೆ. ಅದಕ್ಕೆ ಸ್ಪಂದಿಸಿ ಇವತ್ತು ಕೇಂದ್ರದಿಂದ ಕಮಿಟಿ ಬಂದಿದೆ. ಇವತ್ತು ವಿಜಯಪುರ ಜಿಲ್ಲೆಯ ರೈತರಿಗೆ ಯಾವ ರೀತಿ ಅನ್ಯಾಯ ಆಗುತ್ತಿದೆ. ಕಾಂಗ್ರೆಸ್ ಸರ್ಕಾರ ವಕ್ಫ್ಗೆ ಹೇಗೆ ಕುಮ್ಮಕ್ಕು ನೀಡಿದೆ ಅನ್ನುವುದನ್ನು ಹೇಳುವುದಕ್ಕೆ ಇವತ್ತು ಒಂದು ಅವಕಾಶ ದೊರೆತಿದೆ. ಇದು ನಿಮ್ಮ ಹೋರಾಟದ ಫಲವಾಗಿದೆ. ಯತ್ನಾಳ್ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಯತ್ನಾಳ್ ನೇತೃತ್ವದಲ್ಲಿ ಕರ್ನಾಟಕದ ಎಲ್ಲ ರೈತರಿಗೆ ನ್ಯಾಯ ಸಿಗುತ್ತದೆ. ವಕ್ಫ್ ತಿದ್ದುಪಡಿ ಮಾಡುವುದಕ್ಕೆ ಕೇಂದ್ರ ತಯಾರಾಗಿದೆ. ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಆಗಬಹುದು. ಸಿಎಂ ಲೋಕಾಯುಕ್ತ ವಿಚಾರಣೆ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಆರೋಪಕ್ಕೆ ಒಳಗಾದವರು ವಿಚಾರಣೆ ಒಳಗಾಗುವುದು ಸಹಜ. ಸಿದ್ದರಾಮಯ್ಯ ಕೂಡಾ ಕಾನೂನಿಗೆ ತಲೆಬಾಗಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದರು.