ನವದೆಹಲಿ, ನ.07(DaijiworldNews/AK):ಬಿಜೆಪಿ ಬಿಂಬಿಸುತ್ತಿರುವಂತೆ ನಾನು ಉದ್ಯಮ ವಿರೋಧಿಯಲ್ಲ. ನಾನು ಏಕಸ್ವಾಮ್ಯ ಮತ್ತು ಕೆಲವೇ ಕೆಲವರ ಒಡೆತನದ ವಿರೋಧಿ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವೀ ಟ್ ಮಾಡಿರುವ ಅವರು, ನಾನು ಅಲ್ಪವೂ ಉದ್ಯಮ ವಿರೋಧಿಯಲ್ಲ. ಆದರೆ, ಏಕಸ್ವಾಮ್ಯ, ಬೆರಳೆಣಿಕೆಯ ಮಂದಿ ವ್ಯವಹಾರದ ಮೇಲೆ ಹಿಡಿತ ಸಾಧಿಸುವುದರ ವಿರೋಧಿ. ನಾನು ನನ್ನ ಉದ್ಯೋ ಗವನ್ನು ಆರಂಭಿಸಿದ್ದೇ ಮ್ಯಾನೇಜ್ಮೆಂ ಟ್ ಕನ್ಸಲ್ಟಂಟ್ ಆಗಿ ಎಂದು ಹೇಳಿದರು.
ನಾನು ಉದ್ಯೋ ಗ, ಉದ್ಯಮ, ಅನ್ವೇ ಷಣೆ, ಸ್ಮರ್ಧಾತ್ಮಕತೆ ಪರವಾಗಿದ್ದು ಎಲ್ಲ ಉದ್ಯಮಗಳಿಗೆ ನಮ್ಮ ಆರ್ಥಿಕತೆಯಲ್ಲಿ ಮುಕ್ತ, ನ್ಯಾಯಯುತ ಜಾಗ ಸಿಗಬೇಕು ಎಂದು ಆಶಿಸುತ್ತೇನೆ ಎಂದು ತಿಳಿಸಿದರು.