ಬಳ್ಳಾರಿ, ನ.08(DaijiworldNews/AK):ಉಪಚುನಾವಣೆ ಬಳಿಕ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್ ಸೂಚನೆ ಕೊಟ್ಟಿದೆ. ಸಿಎಂ ಜೈಲಿಗೆ ಹೋಗುವುದು ಗ್ಯಾರಂಟಿಯಾಗಿದೆ. ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಸಂಡೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಲೋಕಾಯುಕ್ತ ತನಿಖೆ ಸರಿಯಾಗಿ ನಡೆಯತ್ತಿಲ್ಲ. ಸಿಎಂ ಎ೧ ಆರೋಪಿಯಾಗಿದ್ದು ಈ ಪ್ರಕರಣ ಸಿಬಿಐಗೆ ವಹಿಸಬೇಕು.25 ಸಾವಿರ ಕೋಟಿ ರೂ. ಗಣಿಗಾರಿಕೆ ಹಣವನ್ನು ಸಂಗ್ರಹಿಸಿದ್ದಾರೆ. ಆದರೆ ಅದನ್ನು ಬಳಕೆ ಮಾಡಲು ಅವರಿಂದ ಆಗುತ್ತಿಲ್ಲ. ಅಭಿವೃದ್ಧಿ ಬದಲು ಆ ದುಡ್ಡು ಹೊಡೆಯಲು ಸಂಚು ರೂಪಿಸಿದ್ದಾರೆ ಎಂದರು.
ಸಿದ್ದರಾಮಯ್ಯ ಅಹಂಕಾರದ ಮನುಷ್ಯ, ನಾನು 1 ಲಕ್ಷ ಕೋಟಿ ರೂ. ಲೂಟಿ ಮಾಡಿದ್ದೇನೆ ಎಂದು ಆರೋಪ ಮಾಡುತ್ತಾರೆ. ಸಿಎಂ ಹುಚ್ಚರಾಗಿದ್ದಾರೆ ಅವರ ಯುಪಿಎ ಸರ್ಕಾರ ಇದ್ದಾಗ ಏನು ಕಿತ್ತುಕೊಳ್ಳಲು ಆಗಲಿಲ್ಲ. ಈಗ ಏನು ಮಾತಾಡುತ್ತೀರಾ? ಅವರಿಗೆ ನೆಮ್ಮದಿ ಕದಡಿದೆ ಯಾವಾಗ ಅರೆಸ್ಟ್ ಆಗುತ್ತೀನೋ ಎನ್ನುವ ಭೀತಿಯಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದರು.