ಹುಬ್ಬಳ್ಳಿ, ನ.10(DaijiworldNews/AA): ಈ ಉಪಚುನಾವಣೆ ಬಿಜೆಪಿ ಬಸವರಾಜ ಬೊಮ್ಮಾಯಿ ವರ್ಸಸ್ ಕಾಂಗ್ರೆಸ್ ಸರ್ಕಾರ. ಇದು ಕಾಂಗ್ರೆಸ್ನ ಸರ್ವಾಧಿಕಾರ, ದಬ್ಬಾಳಿಕೆಯ ಸರ್ಕಾರ ನಡೀತಾ ಇದೆ. ವಕ್ಫ್ ನೋಟಿಸ್ ವಾಪಸ್ ಪಡೆದಿರೋದು ಕಣ್ಣು ಒರೆಸೋ ತಂತ್ರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣದ ಹೊಳೆ ಹರಿಸೋಕೆ ಆರಂಭ ಮಾಡಿದ್ದಾರೆ. ಹಣ ಹಂಚುವುದರಲ್ಲಿ ಅವರಲ್ಲೇ ಪೈಪೋಟಿ ನಡೆದಿದೆ. ಸಮುದಾಯವಾರು ಶಾಸಕರು, ಸಚಿವರು ಹಣ ಹಂಚುತ್ತ ಇದ್ದಾರೆ. ಇಂತಹ ಹಣದ ಹೊಳೆ ಎಲ್ಲೂ ನೋಡಿಲ್ಲ ಎಂದರು.
ವಕ್ಫ್ ಹಿನ್ನೆಲೆ ಹಾವೇರಿ ರೈತನ ಸಾವಿನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಸತ್ಯವಾದದ್ದು, ಕೋರ್ಟ್ ಗೆ ಹೋಗುವುದಕ್ಕಾಗಲ್ಲ. ಅದಾಲತ್ಗೆ ಹೋಗಬೇಕು ಅಲ್ಲಿ ಸಿಗಲ್ಲ. ಅಧಿಕಾರಿಗಳು ಮಾತು ಕೇಳಲ್ಲ. ಇಂತಹ ಪರಿಸ್ಥಿತಿ ಸಿಲುಕಿದ ರೈತರು ಏನು ಮಾಡುತ್ತಾರೆ? ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ ಮೇಲೆ ಅವರ ಮೇಲೆ ಕೇಸ್ ಹಾಕುತ್ತಾರೆ. ಇದು ಸರ್ವಾಧಿಕಾರ, ದಬ್ಬಾಳಿಕೆಯ ಸರ್ಕಾರ ನಡೀತಾ ಇದೆ. ಹಿಂದೆ ಎಮರ್ಜೆನ್ಸಿಯಲ್ಲಿ ಇದೆಲ್ಲ ಆಗಿದೆ. ಆಮೇಲೆ ಪರಿಸ್ಥಿತಿ ಹೇಗಾಗಿದೆ ಅನ್ನೋದು ಗೊತ್ತಿದೆ. ಅದೇ ಈ ಸರ್ಕಾರಕ್ಕೂ ಆಗುತ್ತದೆ ಎಂದು ಹೇಳಿದ್ದಾರೆ.
ಯತ್ನಾಳ್ ಮೇಲೆ ಪ್ರಾಸಿಕ್ಯೂಷನ್ ಬಗ್ಗೆ ಮಾತನಾಡಿದ ಅವರು, ವಿರೋಧ ಪಕ್ಷ ಧಮನ ಮಾಡಬೇಕು. ಅವರ ನೈತಿಕತೆ ಕುಗ್ಗಿಸುವ ಪ್ರಯತ್ನ ಸಾಧ್ಯವಾಗಲ್ಲ. ಎಷ್ಟು ಒತ್ತಡ ಹಾಕಿದರೂ ಪುಟಿದು ಏಳುತ್ತೇವೆ. ಕೋವಿಡ್ ವೇಳೆ ಪಿಪಿಇ ಕಿಟ್ ಉತ್ಪಾದನೆ ಇರಲಿಲ್ಲ. ವೈದ್ಯರು, ನರ್ಸ್ ಗಳಿಗೆ ಪಿಪಿಇ ಕಿಟ್ ಇಲ್ಲದೇ ಕೆಲಸ ಮಾಡೋಕೆ ಆಗಲ್ಲ. ಹೀಗಾಗಿ ಪಿಪಿಇ ಕಿಟ್ ತಂದಿರೋದು ನಿಜ. ಈ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಆಗಿದೆ. ಕಾರಣಗಳನ್ನು ಆಗಲೇ ಆರೋಗ್ಯ ಸಚಿವರು ಕೊಟ್ಟಿದ್ದಾರೆ. ನ್ಯಾಷನಲ್ ಡಿಸಾಸ್ಟರ್ ಮಾಡಿದ್ರು, ಎನ್ಡಿಆರ್ಎಫ್ ಇಂದ ಹಣ ತಗೊಂಡಿದ್ದೆವು. ಎಲ್ಲಾ ಮುಗಿದ ಮೇಲೆ ಅದನ್ನ ವಿಶ್ಲೇಷಣೆ ಮಾಡೋದು ಬೇರೆ. ಜನರ ಪ್ರಾಣ ಉಳಿಸಲು ಕೆಲವು ನಿರ್ಣಯ ತಗೊಂಡಿದ್ದೇವೆ. ಅದೇ ಒಂದು ಅಪರಾಧ ಅಂತಾ ಬಿಂಬಿಸೋದು ಎಷ್ಟು ಸರಿ? ಇವೆಲ್ಲ ಕಾನೂನಿನ ಪ್ರಕಾರ ಆಗಿದೆ ಎಂದು ತಿಳಿಸಿದರು.