ಕಾರವಾರ,ನ.11(DaijiworldNews/TA):ಚೀನಾ ಗಡಿಯಲ್ಲಿ ಸಂಚು ರೂಪಿಸುತ್ತಿರುವಾಗಲೇ ಜಿಪಿಎಸ್ ಟ್ರಾನ್ಸ್ ಮಿಟರ್ ಹಾಗೂ ಟ್ಯಾಗ್ ಇರುವ ರಣಹದ್ದು ಕರ್ನಾಟಕದಲ್ಲಿ ಸಂಚಲನ ಮೂಡಿಸಿದೆ. ಈ ರಣಹದ್ದು ಐದು ದಿನಗಳಿಂದ ಕಾರವಾರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುತ್ತುತ್ತಿದೆ ಎಂದು ತಿಳಿದು ಬಂದಿದೆ.
ಜಿಪಿಎಸ್ ಟ್ರಾನ್ಸ್ಮೀಟರ್, ಟ್ಯಾಗ್ ಹೊಂದಿದ್ದ ರಣಹದ್ದು ಕಾರವಾರ ಬಳಿಯ ಕೋಡಿಭಾಗ್ನ ನದಿ ಸುತ್ತ ಕಳೆದ 5 ದಿನದಿಂದ ಹಾರಾಟ ನಡೆಸುತ್ತಿದೆ. ಕ್ಯಾಮರಾ ಮೂಲಕ ಜೂಮ್ ಮಾಡಿ ನೋಡಿದಾಗ ಜಿಪಿಎಸ್ ಟ್ರಾನ್ಸ್ಮೀಟರ್ ಹೊಂದಿರುವುದು ಬಹಿರಂಗವಾಗಿದೆ.
ಟ್ಯಾಗ್, ಟ್ರಾನ್ಸ್ಮೀಟರ್ ನೋಡಿದ ಸ್ಥಳೀಯರು ಆತಂಕಗೊಂಡಿದ್ಧಾರೆ. ಶತ್ರು ದೇಶದವರು, ಉಗ್ರರು ಹಾರಿಸಿರಬಹುದೆಂದು ಶಂಕಿಸಿದ್ದಾರೆ. ಕಾರವಾರದಲ್ಲಿ ಅಣುಸ್ಥಾವರ, ನೌಕಾನೆಲೆ ಇರುವುದಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.
ಅರಣ್ಯ ಇಲಾಖೆ, ರಾಜ್ಯ, ಕೇಂದ್ರ ಐಬಿ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದ್ದು, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಂಶೋಧನೆ ಉದ್ದೇಶಕ್ಕಾಗಿ ತಾಡೋಬಾ-ಅಂಧೇರಿ ಹುಲಿ ಸಂರಕ್ಷಿತಾರಣ್ಯದಿಂದ ರಣಹದ್ದು ಹಾರಿಸಲಾಗಿತ್ತು ಎಂಬ ಮಾಹಿತಿ ದೊರೆತಿದೆ. ರಣಹದ್ದುಗಳ ಜೀವನದ ಬಗ್ಗೆ ಅಧ್ಯಯನ ನಡೆಸುವ ಉದ್ದೇಶದಿಂದ Mahaforest.gov.in ಎಂದು ಬರೆದಿರುವ ಟ್ರಾನ್ಸ್ಮೀಟರ್ ಅಳವಡಿಕೆ ಮಾಡಿ ಹಾರಿಬಿಡಲಾಗಿದೆ ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ. ಆತಂಕಗೊಂಡಿದ್ದ ಗ್ರಾಮಸ್ಥರು ಮಾಹಿತಿ ತಿಳಿದ ನಂತರ ನಿಟ್ಟುಸಿರು ಬಿಟ್ಟಿದ್ದಾರೆ.