ಚಿತ್ರದುರ್ಗ, ನ.13(DaijiworldNews/AK): ಮಾಜಿ ಮುಖ್ಯಮಂತ್ರಿ, ರಾಷ್ಟ್ರನಾಯಕ ದಿ.ಎಸ್ ನಿಜಲಿಂಗಪ್ಪ ಅವರ ಮನೆಯನ್ನು ರಾಜ್ಯ ಸರ್ಕಾರ 5 ಕೋಟಿಗೆ ಖರೀದಿ ಮಾಡಿದೆ.
ನಿಜಲಿಂಗಪ್ಪ ಅವರ ಮನೆ ಖರೀದಿಸಿ, ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರ ಸಜ್ಜಾಗಿದ್ದು, 5 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. 2 ಕೋಟಿ ಹಣವನ್ನು ಚಿತ್ರದುರ್ಗ ಡಿಸಿ ಖಾತೆಗೆ ಸರ್ಕಾರ ಬಿಡುಗಡೆಗೊಳಿಸಿದೆ. ಪುತ್ರ ಕಿರಣ್ ಶಂಕರ್ ನಿಜಲಿಂಗಪ್ಪ ಮನೆ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದ ಬೆನ್ನಲ್ಲೇ ಚಿತ್ರದುರ್ಗದ ಡಿಸಿ ನಿವಾಸದ ಬಳಿಯಿರುವ ಎಸ್ ನಿಜಲಿಂಗಪ್ಪ ನಿವಾಸವನ್ನು ಸರ್ಕಾರ ಖರೀದಿಸಿದೆ.
ಈ ಹಿಂದೆ ಕೆಪಿಸಿಸಿಯಿಂದ ನಿಜಲಿಂಗಪ್ಪ ಮನೆ ಖರೀದಿ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿತ್ತು.