ಗಾಂಧಿನಗರ, ನ.19(DaijiworldNews/AA): ಭಾರತ - ಪಾಕಿಸ್ತಾನ ಸಮುದ್ರ ಗಡಿಯ ಮಧ್ಯೆ ಪಾಕಿಸ್ತಾನ ಕರಾವಳಿ ಭದ್ರತಾ ಏಜೆನ್ಸಿ ವಶದಲ್ಲಿದ್ದ ಏಳು ಭಾರತೀಯ ಮೀನುಗಾರರನ್ನು ಗುಜರಾತ್ ಕರಾವಳಿ ಕಾವಲು ಪಡೆ ರಕ್ಷಣೆ ಮಾಡಿದೆ.
ಭಾರತೀಯ ಮೀನುಗಾರರ ದೋಣಿಯೊಂದು ಮೀನುಗಾರಿಕೆ ರಹಿತ ಪ್ರದೇಶದಲ್ಲಿ ಇರುವುದನ್ನು ಕಂಡ ಕರಾವಳಿ ಕಾವಲು ಪಡೆ ಏನೋ ಸಮಸ್ಯೆಯಾಗಿರುವಾಗಿರುವುದಾಗಿ ಅರಿತು ಬಳಿಕ ಅವರನ್ನು ರಕ್ಷಿಸಿದೆ. ಮೀನುಗಾರರನ್ನು ಉಭಯ ದೇಶಗಳ ನಡುವಿನ ಸಮುದದ್ರ ಗಡಿಯ ಬಳಿ ಅವರ ಹಡಗಿನಲ್ಲಿ ಇರಿಸಲಾಗಿತ್ತು ಎಂದು ಭಾರತೀಯ ಕರಾವಳಿ ಕಾವಲು ಪಡೆ ಮಾಹಿತಿ ನೀಡಿದೆ.
ನ. 18ರ ಮಧ್ಯಾಹ್ನ 3:30ರ ಸುಮಾರಿಗೆ ಮೀನುಗಾರಿಕೆ ರಹಿತ ಪ್ರದೇಶದಲ್ಲಿ ಭಾರತೀಯ ಮೀನುಗಾರರ ದೋಣಿ ಕಂಡಿದ್ದು, ಬಳಿಕ ಇನ್ನೊಂದು ದೋಣಿ 'ಕಾಲ್ ಭೈರವ್' ಅನ್ನು ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ ತಡೆಹಿಡಿದಿದೆ. ಜೊತೆಗೆ ಆ ಹಡಗಿನಲ್ಲಿ 7 ಮೀನುಗಾರರು ಇರುವುದಾಗಿ ತಿಳಿದುಬಂದಿದೆ. ಕೂಡಲೇ ಕರಾವಳಿ ಕಾವಲು ಪಡೆ ಕಾರ್ಯಾಚರಣೆ ಆರಂಭಿಸಿದ್ದು, ಭಾರತ - ಪಾಕ್ ಸಮುದ್ರ ಗಡಿ ಬಳಿ ತಲುಪಿದ್ದು, ಮೀನುಗಾರರನ್ನು ರಕ್ಷಿಸಿದೆ.
ಏಳು ಮೀನುಗಾರರನ್ನು ಪಾಕಿಸ್ತಾನದ ಹಡಗಿನಿಂದ ಸುರಕ್ಷಿತವಾಗಿ ಕರೆತರಲಾಗಿದ್ದು, ಆರೋಗ್ಯವಾಗಿದ್ದಾರೆ. ಈ ಘಟನೆಯಲ್ಲಿ ಭಾರತೀಯ ದೋಣಿ ಕಾಲ್ ಭೈರವ್ ಹಾನಿಗೊಳಗಾಗಿದ್ದು, ಮುಳುಗಿದೆ ಎಂದು ಹೇಳಿದೆ.