ಚಾಮರಾಜನಗರ, ನ.19(DaijiworldNews/AA): ಸಿದ್ದರಾಮಯ್ಯ ಸಿಎಂ ಆಗಿರುವವರೆಗೂ, ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರ ಖಾಸಗೀಕರಣ ಆಗಲ್ಲ. ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಕೊಡ್ತೀವಿ ಎಂದು ಖಾತೆ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಬೇರೆ ಕಡೆ ವಿದ್ಯುತ್ ಖರೀದಿಸಿ ರೈತರಿಗೆ ಉಚಿತ ವಿದ್ಯುತ್ ನೀಡ್ತಿದ್ದೇವೆ. ವಿದ್ಯುತ್ ಕಳ್ಳತನ ತಪ್ಪಿಸಲು ಕೃಷಿ ಪಂಪ್ ಸೆಟ್ಗಳಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲಾಗಿದೆ. ಇದರಿಂದ ರೈತರಿಗೆ ಅನುಕೂಲ. ಯಾರೋ ವಿದ್ಯುತ್ ಕಳ್ಳತನ ಮಾಡಿ ರೈತರ ಮೇಲೆ ಹಾಕುತ್ತಿದ್ದರು. ಆಧಾರ್ ಲಿಂಕ್ನಿಂದ ಅದೆಲ್ಲಾ ತಪ್ಪಲಿದೆ. ನಮ್ಮ ಇಲಾಖೆಗೂ ಲೆಕ್ಕ ಸಿಗಲಿದೆ ಸ್ಪಷ್ಟನೆ ನೀಡಿದರು.
ಕೃಷಿ ಪಂಪ್ಸೆಟ್ ಅಕ್ರಮ ಸಕ್ರಮದ ಅಡಿ 4 ಲಕ್ಷ ಅರ್ಜಿ ಬಾಕಿ ಇದ್ದವು. ಈಗ ಅದೆಲ್ಲಾ ಕಡಿಮೆಯಾಗಿದೆ. ವಿದ್ಯುತ್ ಲೈನ್ನಿಂದ 500 ಮೀಟರ್ ಒಳಗೆ ಇರುವ ಕೃಷಿ ಪಂಪ್ಸೆಟ್ಗಳ ಸಕ್ರಮಕ್ಕೆ ಕ್ರಮ ವಹಿಸಲಾಗುವುದು. 500 ಮೀಟರ್ ಆಚೆ ಇರುವ ಕೃಷಿ ಪಂಪ್ಸೆಟ್ಗಳಿಗೆ ಕುಸುಮ್ 'ಬಿ ಸೋಲಾರ್' ಯೋಜನೆ ಜಾರಿ ಮಾಡಲಾಗುವುದು. ಪಂಪ್ಸೆಟ್ ಮೋಟಾರ್, ಮೀಟರ್ ಎಲ್ಲವನ್ನು ಇಲಾಖೆಯಿಂದಲೇ ನೀಡುತ್ತೇವೆ. 80% ಸಬ್ಸಿಡಿ ಕೊಡ್ತೀವಿ ಎಂದು ತಿಳಿಸಿದರು.