ಚುರಾಚಾಂದ್ಪುರ, ನ.19(DaijiworldNews/AA): ಮಣಿಪುರದ ಜಿರೀಬಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ದೊರಕಿಸಿಕೊಡುವಂತೆ ಚುರಾಚಾಂದ್ಪುರ ಜಿಲ್ಲೆಯಲ್ಲಿ ನೂರಾರು ಮಂದಿ ಖಾಲಿ ಶವಪೆಟ್ಟಿಗೆ ಹೊತ್ತು ಇಂದು ಮೆರವಣಿಗೆ ನಡೆಸಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ನೂರಾರು ಮಂದಿ ಖಾಲಿ ಶವಪೆಟ್ಟಿಗೆ ಹೊತ್ತು ಮೆರವಣಿಗೆ ಆರಂಭಿಸಿದ್ದಾರೆ. ಮೃತರಿಗೆ ನ್ಯಾಯ ಒದಗಿಸಬೇಕು, ಜಿರೀಬಾಮ್ ಗುಡ್ಡಗಾಡು ಪ್ರದೇಶಕ್ಕೆ ಪ್ರತ್ಯೇಕ ಆಡಳಿತ ಮಂಡಳಿ ರಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಿನಿಂದ ಹಿಂಸಾಚಾರದಲ್ಲಿ ಮೃತಪಟ್ಟ ಕುಕಿ ಸಮುದಾಯದವರನ್ನು ಸಮಾಧಿ ಮಾಡಿದ 'ನೆನಪಿನ ಗೋಡೆ'ಯ ಬಳಿ ಈ ಮೆರವಣಿಗೆ ಅಂತ್ಯಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ವಾರ ಜಿರೀಬಾಮ್ ಜಿಲ್ಲೆಯಲ್ಲಿ ಭದ್ರತಾಪಡೆ 10 ಮಂದಿ ಶಂಕಿತ ಉಗ್ರರನ್ನು ಹತ್ಯೆ ಮಾಡಿತ್ತು. ಮೃತರಾದವರು ಜಿರೀಬಾಮ್ ಗ್ರಾಮದ ಸ್ವಯಂ ಸೇವಕರು ಎಂದು ಕುಕಿ-ಜೋ ಸಮುದಾಯದ ತಿಳಿಸಿದೆ. ಆದರೆ ಪೊಲೀಸರು ಹತ್ಯೆಯ ಬಳಿಕ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದರು.