ಬೆಂಗಳೂರು, ನ.19(DaijiworldNews/TA): ರಾಜ್ಕುಮಾರ್ ರಸ್ತೆಯಲ್ಲಿರುವ ಮೈ ಇವಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಎಲೆಕ್ಟ್ರಿಕ್ ಸ್ಕೂಟರ್ಗಳು ಹಾಗೂ ಶೋರೂಂ ಹೊತ್ತಿ ಉರಿದಿದೆ. ಶೋರೂಮ್ನ ಒಳಗೆ ಸಿಲುಕಿಕೊಂಡಿದ್ದ ಓರ್ವ ಯುವತಿ ಸುಟ್ಟು ಕರಕಲಾಗಿದ್ದಾಳೆ.
ಶೋರೂಮ್ನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತಿದ್ದ ಪ್ರಿಯಾ (20) ಎನ್ನುವ ಯುವತಿ ಭೀಕರ ಅಗ್ನಿ ಜ್ವಾಲೆಯಲ್ಲಿ ಆಹುತಿಯಾಗಿದ್ದು, ಸದ್ಯ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರ ತೆಗೆದಿದ್ದಾರೆ. ಸಂಜೆ 5.30ರ ಸುಮಾರಿಗೆ ಸ್ಕೂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಶೋರೂಮ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಶೋಮ್ಗೆ ಆವರಿಸಿಕೊಂಡು ಧಗಧಗನೇ ಹೊತ್ತಿ ಉರಿದಿದೆ.
ಶೋರೂಮ್ನ ಒಳಗಡೆ ಇದ್ದ 20 ವರ್ಷದ ಸೇಲ್ಸ್ ಗರ್ಲ್ ಪ್ರಿಯಾ ಹೊರ ಬರಲು ಆಗದೇ ಅಲ್ಲೇ ಸುಟ್ಟು ಕರಕಲಾಗಿದ್ದಾಳೆ. ಶೋರೂಮ್ನಲ್ಲಿದ್ದ 45ಕ್ಕೂ 45 ಸ್ಕೂಟರ್ಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ರಾಜಾಜಿನಗರ ಠಾಣೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.