ಬೆಂಗಳೂರು, ನ.22(DaijiworldNews/AA): ಬಿಜೆಪಿ ಕಾಲದಲ್ಲಿ ಅನುದಾನ ಬಾಕಿ ಇಟ್ಟುಕೊಂಡಿರುವುದನ್ನು ನಮ್ಮ ಸರ್ಕಾರ ಕೊಡುತ್ತಿದೆ. ಹೀಗಾಗಿ ನಮಗೆ ಅನುದಾನ ಕಡಿಮೆ ಆಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಅನುದಾನ ಸಿಗುತ್ತಿಲ್ಲ ಎಂಬ ಕಾಂಗ್ರೆಸ್ ಶಾಸಕರ ಅಳಲು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ 35-40 ಸಾವಿರ ಕೋಟಿ ರೂ. ಕಳೆದ ಸರ್ಕಾರ ನನ್ನ ಇಲಾಖೆಯಲ್ಲಿ ಹಣ ಬಾಕಿ ಇಟ್ಟಿದ್ದಾರೆ. ನನ್ನ ಇಲಾಖೆಯಲ್ಲಿ ಕೊಠಡಿಗಳಿಗೆ ಹಣ ಇಟ್ಟಿರಲಿಲ್ಲ. ಹಳೆ ಬಾಕಿ ಕೊಟ್ಟಿರೋದು ಸಿದ್ದರಾಮಯ್ಯ. ರಾಮಲಿಂಗಾರೆಡ್ಡಿ ಎಷ್ಟು ಹೊಸ ಬಸ್ ತಗೊಂಡಿದ್ದಾರೆ. ಬಿಜೆಪಿ ಅವರು ಬಸ್ ತಗೊಂಡಿಲ್ಲ. ಹೀಗಾಗಿ ನಾವು ಬಸ್ ತೆಗೆದುಕೊಂಡಿದ್ದೇವೆ. ಮನೆಗಳು ಕೊಟ್ಟಿರಲಿಲ್ಲ ಜಮೀರ್ ಕೊಡ್ತಿದ್ದಾರೆ ಇದಕ್ಕೆ ಹೊರೆಯಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಯನ್ನೂ ಜಾರಿಗೊಳಿಸಿದ್ದೇವೆ. ಇದೆಲ್ಲ ಅಭಿವೃದ್ಧಿ ಅಲ್ಲವೇ? ಗ್ಯಾರಂಟಿಗಳಿಗೆ ನಮಗೆ ಎಷ್ಟು ಹಣ ಕೊರತೆ ಆಗಬಹುದು ಅಂತ ನಾವು ಹೈಕಮಾಂಡ್ ನಾಯಕರಿಗೂ, ಸಿದ್ದರಾಮಯ್ಯ ಅವರಿಗೆ ಮೊದಲೇ ಹೇಳಿದ್ದೆವು. ಎಷ್ಟು ಅನುದಾನ ಕಡಿಮೆ ಬರಬಹುದು ಅಂತ ಹೇಳಿದ್ದೆವು. ಹಳೆ ಬಿಜೆಪಿ ಸರ್ಕಾರದ ಬ್ಯಾಕ್ ಲ್ಯಾಗ್ ಹಣದಿಂದ ನಮಗೆ ಸಮಸ್ಯೆಯಾಗಿದೆ. ಪಕ್ಷದ ಸಭೆಯಲ್ಲಿ ನಾನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಬಳಿ ಶಾಸಕರ ಅಳಲನ್ನು ಚರ್ಚಿಸುತ್ತೇನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 1,250 ಕೋಟಿ ರೂ. ಹಣ ಕೊಟ್ಟಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಆಗುತ್ತಿದೆ ಎಂದರು.