ಬೆಂಗಳೂರು, ನ.22(DaijiworldNews/AK):ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಕ್ಫ್ ಕಾಯ್ದೆ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಇಂದು ನಗರದಲ್ಲಿ ಮಾಧ್ಯಮದದೊಂದಿಗೆ ಮಾತಾಡಿದ ಅವರು, 1994ರಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಜಮೀನು, ಮಠಮಾನ್ಯ ಮತ್ತು ದೇವಸ್ಥಾನಗಳಿಗೆ ಸೇರಿದ ಜಮೀನುಗಳನ್ನು ಅಪಾಯಕ್ಕೆ ಸಿಲುಕಿಸಲಾಗಿದೆ ಎಂದರು.
ವಕ್ಫ್ ಬೋರ್ಡ್ ಯಾವುದೇ ಜಮೀನನ್ನು ತನಗೆ ಸೇರಿದ್ದು ಅಂತ ಹೇಳಿದರೆ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೇರೆ ಜನ ಸಿವಿಲ್ ಕೋರ್ಟ್ಗೆ ಹೋಗಲಾಗದು, ಎಲ್ಲ ಮುಸ್ಲಿಮರೇ ಇರುವ ವಕ್ಫ್ ಟ್ರಿಬ್ಯೂನಲ್ ಮುಂದೆ ಗೋಗರೆಯಬೇಕು, ಹಾಗಾಗಿ ವಕ್ಫ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಬಿಜೆಪಿಯ ಹೋರಾಟ ನಡೆಯಲಿದೆ ಎಂದು ಹೇಳಿದರು.
2025ರ ಐಪಿಎಲ್ ಟೂರ್ನಿಯು ಮಾರ್ಚ್ 14ರಂದು ಪ್ರಾರಂಭವಾಗಿ ಮೇ 25ರವರೆಗೆ ನಡೆಯಲಿದೆ. ಈ ಬಾರಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಇದೇ ತಿಂಗಳ 24 ಹಾಗೂ 25 ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿದೆ.
ಅಷ್ಟ ಮಠದ ಜಾಗವನ್ನೂ ವಕ್ಫ್ ಬೋರ್ಡಿಗೆ ಸೇರಿದ್ದು ಎನ್ನುತ್ತಾರೆ. ಆಳಂದ ತಾಲ್ಲೂಕಿನಲ್ಲಿ ಸಿದ್ದರಾಮಯ್ಯನವರ ಕುಲದೇವರಾದ ಬೀರಲಿಂಗೇಶ್ವರರ ಗುಡಿ, ಸಾವಿರಾರು ಎಕರೆ ರೈತರ ಜಮೀನು, ಹಿಂದೂಗಳ ಸ್ಮಶಾನವನ್ನೂ ವಕ್ಫ್ಗೆ ಸೇರಿದ್ದು ಎನ್ನುತ್ತಿದ್ದಾರೆ ಎಂದರು.