ಮೈಸೂರು,ನ.22(DaijiworldNews/AK): ಡಾಕ್ಟರ್ ಓದಿರ್ತಾರೆ, ಎಂಜಿನಿಯರಿಂಗ್ ಓದಿರ್ತಾರೆ. ಆದರೆ ಮೌಡ್ಯ, ಕಂದಾಚಾರ ಬಿಡೋದೇ ಇಲ್ಲ. ಇಂಥಾ ಶಿಕ್ಷಣ ಬೇಕಾ?ಬಸವಣ್ಣನವರು ಕರ್ಮ ಸಿದ್ಧಾಂತ ತಿರಸ್ಕರಿಸಿದ್ದರು. ಈಗ ಬಸವಣ್ಣನವರ ಹೆಸರಲ್ಲೇ ಕರ್ಮಸಿದ್ಧಾಂತ ಪಾಲಿಸುವವರು ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಸಿದ್ಧಾರ್ಥ ಎಜುಕೇಷನ್ ಸೊಸೈಟಿಯ ಕ್ವೆಸ್ಟ್ ಶಿಕ್ಷಣ ಅಕಾಡೆಮಿಯನ್ನು ಉದ್ಘಾಟಿಸಿ ಮಾತನಾಡಿದರು.ಬರೀ ಶಿಕ್ಷಣ ಸಿಕ್ಕರೆ ಸಾಲದು. ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ವಿಕಾಸ ಆಗಲು, ಸ್ವಾಭಿಮಾನಿಗಳಾಗಲು ಶಿಕ್ಷಣ ಅತ್ಯಗತ್ಯ. ಬಹಳ ಮಂದಿ ಶಿಕ್ಷಿಣ ಪಡೆದಿರುತ್ತಾರೆ, ಆದರೆ ಅವರಲ್ಲಿ ಸಾಮಾಜಿಕ ಸ್ಪಂದನೆ, ಮಾನವೀಯ ಸ್ಪಂದನೆ ಇರುವುದಿಲ್ಲ. ಶಿಕ್ಷಣ ಕಲಿತೂ ಜಾತಿವಾದಿಗಳಾದು, ಧಾರ್ಮಿಕ ತಾರತಮ್ಯ ಪಾಲಿಸೋದು ಮಾಡಿದ್ರೆ ಅಂಥಾ ಶಿಕ್ಷಣದಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಕೆಲವರು ಮಾತ್ರ ಸಮಾಜದ ಸವಲತ್ತುಗಳನ್ನು ಅನುಭವಿಸಬೇಕಾ? ಸಮಾಜದ ಪ್ರತಿಯೊಬ್ಬರಿಗೂ ಈ ಸವಲತ್ತುಗಳು ಸಿಗಬೇಕು ತಾನೇ? ಸಾಮಾಜಿಕ ತಾರತಮ್ಯ ಹೋಗಬೇಕೂ ತಾನೇ ಎಂದು ಪ್ರಶ್ನಿಸಿದರು.ಡಾಕ್ಟರ್ ಓದಿರ್ತಾರೆ, ಎಂಜಿನಿಯರಿಂಗ್ ಓದಿರ್ತಾರೆ. ಆದರೆ ಮೌಡ್ಯ, ಕಂದಾಚಾರ ಬಿಡೋದೇ ಇಲ್ಲ. ಇಂಥಾ ಶಿಕ್ಷಣ ಬೇಕಾ ಎಂದು ಪ್ರಶ್ನಿಸಿದರು.