ಬಳ್ಳಾರಿ, ನ.23(DaijiworldNews/AA): ಸಂಡೂರಿನಲ್ಲಿ ಹಣ ಬಲ ಕೆಲಸ ಮಾಡಿದೆ. ಸೋಲಿನ ಹೊಣೆ ನಾನೇ ಹೊರುವೆ. ಈ ಸೋಲನ್ನ ಸವಾಲಾಗಿ ಸ್ವೀಕರಿಸುತ್ತೇವೆ ಎಂದು ಎಂದು ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ತಿಳಿಸಿದ್ದಾರೆ.
ಕಾಂಗ್ರೆಸ್ ಹಣಬಲದಿಂದ ಗೆದ್ದಿದೆ. ಕಾಂಗ್ರೆಸ್ ಹಣ ಹಂಚಿಕೆ ಮಾಡದೆ ಇದರೆ ನನ್ನ ಗೆಲುವು ಆಗುತ್ತಿತ್ತು. ಧರ್ಮದ ಮುಂದೆ ಅಧರ್ಮ ಗೆದ್ದಿದೆ. ಮುಸ್ಲಿಂ ಹಾಗೂ ಕುರುಬ ಸಮುದಾಯ ಹೆಚ್ಚಿರುವ ಕಡೆ ಮತ ಬರಲಿಲ್ಲ. ಚುನಾವಣೆ ಸಮಯದಲ್ಲಿ ಭಾಗ್ಯಲಕ್ಷ್ಮೀ ಹಣ ಹಾಕಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ ಎಂದರು.
ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಸಚಿವ ಶಿವರಾಜ್ ತಂಗಡಗಿ ಬಂದು ಹಣ ಹಂಚಿದ್ದಾರೆ. ಸಿಎಂ ಬಂದಿರೋದು ಹಣ ಹಂಚಿರೋದು ನನ್ನ ಸೋಲಿಗೆ ಮುಳುವಾಯಿತು. ಈ ಸೋಲನ್ನು ನಾನು ಸವಾಲಾಗಿ ಸ್ವೀಕರಿಸುವೆ. ಮುಂದಿನ ದಿನ ನನಗೆ ಅಥವಾ ದಿವಾಕರ್ ಯಾರಿಗೆ ಟಿಕೆಟ್ ನೀಡಲಿ. ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದರು.