ರಾಂಚಿ, ನ.23(DaijiworldNews/AK): ಜಾರ್ಖಂಡ್ನ ಪ್ರಜಾಪ್ರಭುತ್ವದ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗಿದ್ದೇವೆ ಎಂದು ಸಿಎಂ ಹೇಮಂತ್ ಸೊರೆನ್ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿವಿಜಯ ಸಾಧಿಸಿದ ಬಳಿಕ ಮಾತನಾಡಿದ ಅವರು, ಚುನಾವಣಾ ಫಲಿತಾಂಶದ ನಂತರ ನಾವು ನಮ್ಮ ಕಾರ್ಯತಂತ್ರವನ್ನು ಅಂತಿಮಗೊಳಿಸುತ್ತೇವೆ. ಈ ಅದ್ಭುತ ಪ್ರದರ್ಶನಕ್ಕಾಗಿ ನಾನು ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜಾರ್ಖಂಡ್ ‘ಅಬುವಾ ರಾಜ್, ಅಬುವಾ ಸರ್ಕಾರ್’ (ಸ್ವಂತ ರಾಜ್ಯ, ಸ್ವಂತ ಸರ್ಕಾರ) ಸ್ಕ್ರಿಪ್ಟ್ ಮಾಡಲು ಸಿದ್ಧವಾಗಿದೆ ಎಂದರು.