ಪಾಟ್ನಾ, ನ.24(DaijiworldNews/AA): ಚುನಾವಣಾ ಚಾಣಕ್ಯ, ರಾಜಕೀಯ ತಂತ್ರಗಾರ ಎಂದೇ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನೇತೃತ್ವದ 'ಜನ್ ಸೂರಜ್' ಪಕ್ಷವು ಈ ಬಾರಿ ಬಿಹಾರ ಉಪ ಚುನಾವಣೆಯಲ್ಲಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
ಈ ಬಾರಿ ಒಟ್ಟು 14 ರಾಜ್ಯಗಳ ೪೮ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಿತು. ಈ ಪೈಕಿ ಬಿಹಾರದ ತರಾರಿ, ರಾಮಗಢ, ಬೆಳಗಂಜ್ ಮತ್ತು ಇಮಾಮ್ಗಂಜ್ ಕ್ಷೇತ್ರಗಳಿಗೂ ಉಪಚುನಾವಣೆ ನಡೆದಿದೆ. ಈ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜನ್ ಸೂರಜ್ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ.
ಪ್ರಶಾಂತ್ ಕಿಶೋರ್ ಅವರು ಚುನಾವಣಾ ತಂತ್ರಗಾರ ಎಂದೇ ಖ್ಯಾತಿ ಪಡೆದಿದ್ದಾರೆ. ಆದರೆ ಇದೀಗ ಅವರ ನೇತೃತ್ವದ ಪಕ್ಷವು ಖಾತೆ ತೆರೆಯುವಲ್ಲಿ ವಿಫಲವಾಗಿದ್ದು, ಇದು ಪ್ರಶಾಂತ್ ಕಿಶೋರ್ಗೆ ಭಾರಿ ಮುಖಭಂಗವನ್ನುಂಟು ಮಾಡಿದೆ.