ನವದೆಹಲಿ, ನ.27(DaijiworldNews/AK): ಅದಾನಿ ಸಮೂಹದ ಲಂಚ ಪ್ರಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಸತ್ತಿನಲ್ಲಿ ಚರ್ಚಿ ಸಲು ಅವಕಾಶ ನೀಡುತ್ತಿಲ್ಲ . ಚರ್ಚೆಗೆ ಒಪ್ಪಿಗೆ ನೀಡಲು ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಹೀಗಾಗಿ ಸಂಸತ್ತಿನ ಉಭಯ ಸದನಗಳನ್ನು ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಉಭಯ ಸದನಗಳಲ್ಲಿ ಅದಾನಿ ಸಮೂಹ ಸೇರಿದಂತೆ ಇನ್ನಿತರೆ ಗಂಭೀ ರ ವಿಷಯಗಳ ಬಗ್ಗೆ ಚರ್ಚೆ ಗೆ ಅವಕಾಶ ಕಲ್ಪಿಸಲು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದರೂ ಇಂತಹ ಧೋರಣೆ ಸರಿಯಲ್ಲ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಮೊದಾನಿ ( ಪ್ರಧಾನಿ ಮೋ ದಿ ಮತ್ತು ಅದಾನಿ) ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ವಿರೋ ಧ ಪಕ್ಷಗಳು ಒತ್ತಾಯಿಸುತ್ತಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಜೈರಾಮ್ ರಮೇ ಶ್ ಹೇಳಿದ್ದಾರೆ.
ಪ್ರಧಾನಿ ಮೋ ದಿ ಮತ್ತು ಗೌತಮ್ ಅದಾನಿ ನಡುವಿನ ಸ್ನೇ ಹದಿಂ ದ ‘ಮೊದಾನಿ‘ ಹಗರಣವು ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈ ಹಗರಣಕ್ಕೆ ಸಂ ಬಂ ಧಿಸಿದಂತೆ ಜೆಪಿಸಿ ತನಿಖೆಗೆ ವಿರೋಧ ಪಕ್ಷಗಳು ಒತ್ತಾಯಿಸಿದೆ ಎಂದು ರಮೇ ಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದ್ದಾರೆ