ಗದಗ, 04 (DaijiworldNews/AK): ಮುಡಾ ಹಗರಣ ವಿಚಾರದಲ್ಲಿ ಇಡಿ ಎಂಬ ಸೀಳು ನಾಯಿಯನ್ನು ನಮ್ಮಮೇಲೆ ಬಿಟ್ಟಿದ್ದಾರೆ. ಇದು ರಾಜಕೀಯ ದಾಳಿ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿ, ಇಡಿ ಎಂಬುದು ಜಾರಿ ನಿರ್ದೇಶನಾಲಯ ಅಲ್ಲ, ಅದು ರಾಜಕೀಯವಾಗಿ ವಿಚಂಟಿಂಗ್ ಏಜೆನ್ಸಿ ಅದು. ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡೋಕೆ. ವಿರೋಧ ಪಕ್ಷದ ನಾಯಕರನ್ನು ಬಲಿಯಾಕಲಿಕ್ಕೆ ಅಷ್ಟೇ ಇಡಿ ಇರುವ ಉದ್ಯೋಗ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಅವರು ಇಲ್ಲಿಯವರಗೆ ಯಾರ ಮೇಲೆ ಕೇಸ್ ಹಾಕಿದ್ದಾರೆ? ಬರೀ ರಾಜಕೀಯ ವಿರೋಧಿಗಳ ಮೇಲೆ ಕೇಸ್ ಹಾಕಿದ್ದಾರೆ. ಶ್ರೀಮಂತರ ಮೇಲೆ, ಕಪ್ಪುಹಣ ಇದ್ದವರ ಮೇಲೆ ಕೇಸ್ ಹಾಕಿದ್ದಾರಾ? ರಾಜಕೀಯ ವಿರೋಧಿಗಳಿಗೆ ಹಿಟ್ ಆಂಡ್ ರನ್ ಮಾಡೋದು ಇವರ ಕೆಲಸವಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ಉಪಚುನಾವಣೆಯಲ್ಲಿ 3 ಸ್ಥಾನ ಕಾಂಗ್ರೆಸ್ ಗೆದ್ದ ಮೇಲೆ, ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಕಳೆದ ವಿಧಾನ ಸಭೆ ಹಾಗೂ ಉಪ ಚುನಾವಣೆಯಲ್ಲೂ ನಮ್ಮನ್ನು ಸೋಲಿಸಲು ಆಗಲಿಲ್ಲ. ಅದಕ್ಕೆ ಇಡಿ ಎಂಬ ಸೀಳು ನಾಯಿಯನ್ನು ನಮ್ಮ ಮೇಲೆ ಬಿಟ್ಟಿದಾರೆ ಎಂದು ಕಿಡಕಾರಿದರು.