ರಾಯಚೂರು, ಡಿ.04(DaijiworldNews/AA): ಫೆಂಗಲ್ ಚಂಡಮಾರುತದ ಪ್ರಭಾವಕ್ಕೆ ರಾಯಚೂರು ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ರೈತರು ಬೆಳೆದ ಭತ್ತದ ಬೆಳೆ ಸಂಪೂರ್ಣವಾಗಿ ನೆಲಸಮವಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಜೋರಾಗಿ ಮಳೆಯಾಗದಿದ್ದರೂ ಜಿಟಿಜಿಟಿ ಮಳೆ, ಶೀತಗಾಳಿ ರೈತರನ್ನ ಕಂಗಾಲು ಮಾಡಿದೆ. ಜಿಲ್ಲೆಯ ರಾಯಚೂರು, ಸಿರವಾರ, ಮಾನ್ವಿ, ದೇವದುರ್ಗ, ಲಿಂಗಸುಗೂರು ತಾಲೂಕಿನಲ್ಲಿ ಹೆಚ್ಚು ಭತ್ತದ ಬೆಳೆ ಹಾನಿಯಾಗಿದೆ. ಫಸಲು ಕಟಾವಿಗೆ ಮುನ್ನವೇ ಸಂಪೂರ್ಣವಾಗಿ ನೆಲಕಚ್ಚಿದ್ದರಿಂದ ರೈತರು ನಿರಾಸೆಯಾಗಿದ್ದಾರೆ.
ಇನ್ನು ಹೀಗೆ ಭತ್ತದ ಬೆಳೆ ನೆಲಕಚ್ಚಿರುವುದನ್ನೇ ಬಂಡವಾಳವಾಗಿಸಿಕೊಂಡಿರುವ ಮಧ್ಯವರ್ತಿಗಳು ಭತ್ತ ಕಟಾವು ಮಷಿನ್ ದರವನ್ನ ದುಪ್ಪಟ್ಟು ಮಾಡಿದ್ದಾರೆ. ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.