ಬೆಂಗಳೂರು, ಡಿ.07(DaijiworldNews/AA): ನಬಾರ್ಡ್ನಿಂದ ರಾಜ್ಯಕ್ಕೆ ಹಣ ಕಡಿಮೆ ಮಾಡಿಲ್ಲ, ಇಡೀ ದೇಶಕ್ಕೆ ಕಡಿಮೆಯಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ಸುಳ್ಳು ಹೇಳುವುದರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ಸಿಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕ್ಗಳು ಕೃಷಿ ವಲಯಕ್ಕೆ ಉತ್ತಮವಾಗಿಯೇ ಸಾಲ ಕೊಡುತ್ತೇವೆ. ರಾಷ್ಟ್ರೀಯ ಬ್ಯಾಂಕ್ಗಳು, ಸಹಕಾರ ಬ್ಯಾಂಕ್ಗಳು 4% ಬಡ್ಡಿ ದರದಲ್ಲಿ ಕೊಡುತ್ತಿವೆ. ಆದರೆ ಸಿಎಂ 7% ನಲ್ಲಿ ಸಾಲ ಕೊಡುತ್ತಿವೆ ಎಂದು ಸುಳ್ಳು ಹೇಳಿದ್ದಾರೆ. ಪ್ರಶ್ನೆ ಕೇಳಿದರೆ ಪತ್ರಕರ್ತರಿಗೆ ಸಿಎಂ ಬೆದರಿಸುತ್ತಾರೆ. ಜನರನ್ನ ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಇವರು ಸುಳ್ಳುಗಾರ ಸಿದ್ದರಾಮಯ್ಯ, ಸುಳ್ಳು ಹೇಳುವುದರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ಸಿಗಬೇಕು. ಈ ರೀತಿ ಸುಳ್ಳು ಹೇಳುವ ಸಿಎಂ ಅನ್ನು ರಾಜ್ಯ ಕಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕೋವಿಡ್ ಕೇಸ್ ಹಾಕುವ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ನವರಿಗೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ. ರಾಜ್ಯಪಾಲರೇ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದರೂ ನೈತಿಕವಾಗಿ ಆವತ್ತೇ ರಾಜೀನಾಮೆ ಕೊಡಬೇಕಿತ್ತು. ರಾಜ್ಯಪಾಲರಿಗೆ, ಸಂವಿಧಾನ ಹುದ್ದೆಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ. ರಾಹುಲ್ ಗಾಂಧಿ ತಲೇನೂ ಖಾಲಿ, ಅವರು ಹಿಡಿದ ಸಂವಿಧಾನದ ಪುಸ್ತಕವೂ ಖಾಲಿ ಎಂದು ಕಿಡಿಕಾರಿದರು.