ಬೆಳಗಾವಿ, ಡಿ.09(DaijiworldNews/AK): ಚಳಿಗಾಲದ ಅಧಿವೇಶನದ ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ" ಕಾರ್ಯಕ್ರಮದ ಮಹಾತ್ಮಗಾಂಧಿ ಅವರ ಲೋಗೋ ಅನಾವರಣ ಗೊಳಿಸಿದರು.

ಬಳಿಕ ಸುವರ್ಣಸೌಧದ ಮೊದಲ ಮಹಡಿಯಲ್ಲಿ ಅನುಭವ ಮಂಟಪದ ತೈಲ ಕಲಾಕೃತಿಯನ್ನು ಲೋಕಾರ್ಪಣೆಗೊಳಿಸಿದ, ಸಭಾಧ್ಯಕ್ಷರ ಕೊಠಡಿಯಲ್ಲಿ ಅನುಭವ ಮಂಟಪ ತೈಲ ಕಲಾಕೃತಿಯ ಕಲಾವಿದರನ್ನು ಸನ್ಮಾನಿಸಿದರು.
ಚಳಿಗಾಲದ ಅಧಿವೇಶನದ ಪ್ರಥಮ ದಿನ ಸುವರ್ಣಸೌಧದಲ್ಲಿ ಮೂವರು ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.ಸಂಡೂರು ಕ್ಷೇತ್ರದ ಅನ್ನಪೂರ್ಣಮ್ಮ, ಚನ್ನಪಟ್ಟಣ ಕ್ಷೇತ್ರದ ಯೋಗೇಶ್ವರ್ ಮತ್ತು ಶಿಗ್ಗಾಂವ್ ನ ಪಠಾಣ್ ಪ್ರಮಾಣ ವಚನ ಸ್ವೀಕರಿಸಿದರು.ಇವರಲ್ಲಿ ಪಠಾಣ್ ಅವರು ಸಂವಿಧಾನ ಪ್ರತಿಯನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸದನದ ಗಮನ ಸೆಳೆದರು.