ನವದೆಹಲಿ, ಡಿ. 10(DaijiworldNews/TA): ಭಾರತ ಒಬ್ಬ ದಿಟ್ಟ ಮತ್ತು ದೂರದೃಷ್ಟಿ ನಾಯಕನನ್ನು ಕಳೆದುಕೊಂಡಿದೆ ಎಂಬುವುದಾಗಿ ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂತಾಪ ಸೂಚಿಸಿದರು.

ಬೆಂಗಳೂರಿಗೆ ಜಾಗತಿಕ ಗುರುತು ನೀಡಿದವರೆ ಎಸ್.ಎಂ.ಕೃಷ್ಣ. ಇವರು ಬ್ರ್ಯಾಂಡ್ ಬೆಂಗಳೂರಿನ ರೂವಾರಿ. ಕೃಷ್ಣ ಅವರ ನಿಧನದಿಂದ ಕರ್ನಾಟಕ ಮಾತ್ರವಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂಬುವುದಾಗಿ ದುಃಖಿಸಿದರು.
ಅವರು ಒಬ್ಬ ಸೌಮ್ಯ ಮತ್ತು ಸೇವಾ ಸಮರ್ಪಿತ ಅನುಭವಿ ರಾಜಕಾರಣಿ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ದೇಶದ ವಿದೇಶಾಂಗ ಮಂತ್ರಿ, ರಾಜ್ಯಪಾಲ ಹೀಗೆ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ದೇಶ ಮತ್ತು ರಾಜ್ಯದ ಪ್ರಗತಿಗೆ ಸೇವೆ ಸಲ್ಲಿಸಿದ್ದಾರೆ ಎಂದರು.