ಮಹಾರಾಷ್ಟ್ರ, ಡಿ. 13(DaijiworldNews/TA): ಮಹಾರಾಷ್ಟ್ರ ಸರ್ಕಾರದ ಖಾತೆ ಹಂಚಿಕೆ ಕುತೂಹಲಕ್ಕೆ ಶೀಘ್ರವೇ ತೆರೆ ಬೀಳುವ ಸಾಧ್ಯತೆಗಳಿದ್ದು, ಅದರಂತೆ ಡಿ.14ರಂದು ಸಂಪುಟ ವಿಸ್ತರಣೆಯಾಗಲಿದೆ ಎಂದು ಡಿಸಿಎಂ ಅಜಿತ್ ಪವಾರ್ ತಿಳಿಸಿದ್ದಾರೆ.

ಇನ್ನು ಇದಕ್ಕೂ ಮುನ್ನ ಸಿಎಂ ದೇವೇಂದ್ರ ಫಡ್ನವೀಸ್ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಡಿಸಿಎಂ ಏಕನಾಥ ಶಿಂಧೆ ಬೇಡಿಕೆ ಇರಿಸಿದ್ದ ಗೃಹ ಖಾತೆ ಬಿಜೆಪಿಯಲ್ಲೇ ಉಳಿಯುವ ಸಾಧ್ಯತೆ ಇದೆ.
ಖಾತೆ ಹಂಚಿಕೆ ಕುರಿತು ಹೊಸ ಸೂತ್ರ ಅಳವಡಿಸಿಕೊಳ್ಳಲು ಮೈತ್ರಿ ನಾಯಕರು ಚಿಂತಿಸಿದ್ದು, 20 ಖಾತೆ ಬಿಜೆಪಿಗೆ ಶಿವಸೇನೆ ಮತ್ತು ಎನ್ಸಿಪಿಗೆ ತಲಾ 10 ಸಚಿವ ಸ್ಥಾನ ದೊರಕಬಹುದು ಎನ್ನಲಾಗಿದೆ.