ವಿಜಯಪುರ, ಡಿ.13(DaijiworldNews/AA): ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಹಕ್ಕಿದೆ. ಆದರೆ ಬಿಜೆಪಿಯವರು ಪಂಚಮಸಾಲಿಗರಿಗೆ ಟೋಪಿ ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರತಿಭಟನೆಗೆ ಲಿಂಗಾಯ ಪಂಚಮಸಾಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ವಿಚಾರವಾಗಿ, ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಹಕ್ಕಿದೆ. ಬಿಜೆಪಿಯವರು ಪಂಚಮಸಾಲಿಗರಿಗೆ ಟೋಪಿ ಹಾಕಿ ಹೋಗಿದೆ. ಇವರು 2ಎ ಕೇಳಿದ್ದರೆ, ಅವರು 2ಡಿ ಮಾಡಿದ್ದಾರೆಂದರು.
ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ತಕರಾರಿಲ್ಲ. ಸಂವಿಧಾನ ಪರವಾಗಿ ಹೋರಾಟ ಇರಬೇಕು. ಹೈಕೋರ್ಟ್ಗೆ ಅಪಡೇಟ್ ಹಾಕಿದವರು ಯಾರು? ಇದೆಲ್ಲ ಮಾಡಿದ್ದು ಬಿಜೆಪಿ ಸರ್ಕಾರದವರು. ಇದೇ ಸ್ವಾಮೀಜಿಗಳು ಇದ್ದರಲ್ಲ, ರಸೂಲ್ ಎಂಬಾತ ಸುಪ್ರೀಂ ಕೋರ್ಟ್ಗೆ ಹೋದರು. ಆಗಿನ ಅಡ್ವಕೇಟ್ ಜನರಲ್ ಇದರಲ್ಲಿ ಬದಲಾವಣೆ ಮಾಡಲ್ಲ ಎಂದು ಹೇಳಿದರು.
ಟ್ರ್ಯಾಕ್ಟರ್ ತೆಗೆದುಕೊಂಡು ಹೋರಾಟ ಮಾಡುತ್ತೀವಿ ಎಂದರು. ಆಗ ಕೋರ್ಟ್ ಶಾಂತಿಯುತವಾಗಿ ಮಾಡುವುದಕ್ಕೆ ಹೇಳಿತ್ತು. ಆದರೂ ಕಾನೂನು ಕೈಗೆ ತೆಗೆದುಕೊಂಡರು. ನಾನು ಮೂರು ಜನ ಮಂತ್ರಿಗಳನ್ನು ಕಳಿಸಿದ್ದೆ. ಮಂತ್ರಿಗಳು ಕರೆದಾಗ ಅವರು ಸಿಎಂಗೆ ಮಾತಾಡಿಸುತ್ತೇವೆ ಎಂದರು. ಆದರೆ ನಾನು ಎಲ್ಲ ಕಡೆಗೂ ಹೋಗುವುದಕ್ಕೆ ಆಗುವುದಿಲ್ಲ. ಆದರೂ ನಾನು ಅವರನ್ನು ಮಾತನಾಡಿಸಲು ಕರೆದರೂ ಅವರು ಬರಲಿಲ್ಲ. ಆಗ ಸುವರ್ಣಸೌಧಕ್ಕೆ ನುಗ್ಗಲು ಯತ್ನ ಮಾಡಿದರು. ಕಲ್ಲು ತೂರಾಟ ಮಾಡಿದರು, ಪೊಲೀಸರಿಗೆ ಗಾಯಗೊಂಡಿದ್ದಾರೆ. ನಮ್ಮ ಬಳಿ ಪ್ರೂಫ್ ಇವೆ, ಫೋಟೋ ಬೇಕಾದರೂ ತೋರಿಸುತ್ತೇನೆ. ಕಾನೂನು ಕೈಗೆ ತೆಗೆದುಕೊಂಡರೆ ಸರ್ಕಾರ ಸುಮ್ಮನಿರಲ್ಲ. ಶಾಂತಿಯುತವಾಗಿ ಹೋರಾಟ ಮಾಡಬೇಕು ಎಂದು ಎಚ್ಚರಿಸಿದರು.