ಪ್ರಯಾಗರಾಜ್ ,,ಡಿ.12(DaijiworldNews/AK): ಮಹಾಕುಂಭ 2025ರ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಪ್ರಯಾಗರಾಜ್ನಲ್ಲಿರುವ ಸಂಗಮ್ನ ಪವಿತ್ರ ಭೂಮಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿದ್ದಾರೆ.

ಮಹಾಕುಂಭಕ್ಕೆ ಮೂಲಸೌಕರ್ಯಗಳನ್ನು ಹೆಚ್ಚಿಸಲು 5,500 ಕೋಟಿ ರೂ.ಗಳ ಯೋಜನೆಗೆ ಮೋದಿ ಇಂದು ಚಾಲನೆ ನೀಡಿದರು. ಈ ವೇಳೆ ತಮ್ಮ ಭಾಷಣದಲ್ಲಿ, ಅವರು ಈ ಭವ್ಯ ಕಾರ್ಯಕ್ರಮದ ಯಶಸ್ಸಿಗೆ ಕೊಡುಗೆ ನೀಡಿದ ಸಂತರು, ಋಷಿಗಳು ಮತ್ತು ಅಸಂಖ್ಯಾತ ಕಾರ್ಯಕರ್ತರ ಪ್ರಯತ್ನಗಳನ್ನು ಶ್ಲಾಘಿಸಿದರು. ಮಹಾ ಕುಂಭ ಪ್ರಪಂಚದಾದ್ಯಂತ ಗಮನ ಸೆಳೆಯುವ “ಏಕತೆಯ ಮಹಾ ಯಾಗ” ಎಂದು ಮೋದಿ ಹೇಳಿದರು.
ನಂಬಿಕೆ, ಜ್ಞಾನ ಮತ್ತು ಭಕ್ತಿಯ ಸಂಗಮಕ್ಕೆ ಹೆಸರುವಾಸಿಯಾದ ಮಹಾ ಕುಂಭವು ಸತತ 45 ದಿನಗಳವರೆಗೆ ಪ್ರತಿದಿನ ಲಕ್ಷಾಂತರ ಭಕ್ತರನ್ನು ಸ್ವಾಗತಿಸಲು ಸಜ್ಜಾಗಿದೆ. ಈ ಸಮಾರಂಭ ಹೊಸ ನಗರ ಮತ್ತು ಹೊಸ ಇತಿಹಾಸ”ವನ್ನು ಪ್ರಯಾಗ್ರಾಜ್ನ ಪವಿತ್ರ ಭೂಮಿಯಲ್ಲಿ ರೂಪಿಸುತ್ತಿದೆ ಎಂದು ಹೇಳಿದ್ದಾರೆ.