ಹರಿಯಾಣ,ಡಿ. 15(DaijiworldNews/TA): ದೇವಯಾನಿ ಸಿಂಗ್ ನೋಡಲು ಸಿನಿಮಾ ನಟಿಯಂತೆ ಕಾಣುವ ಈಕೆ ನಿಜಕ್ಕೂ ಪ್ರತಿಭಾವಂತೆ. ಈಗ IRS ಅಧಿಕಾರಿಯಾಗಿರುವ ಇವರ ಸಾಧನೆಯ ಸ್ಟೋರಿ ಇಲ್ಲಿದೆ.

IRS ದೇವಯಾನಿ ಸಿಂಗ್ ಹರಿಯಾಣದ ನಿವಾಸಿ. ಅವರ ತಂದೆ ವಿನಯ್ ಸಿಂಗ್ ಹಿಸಾರ್ನ ವಿಭಾಗೀಯ ಆಯುಕ್ತರಾಗಿದ್ದಾರೆ. ತಂದೆಯಂತೆಯೇ ಸರ್ಕಾರಿ ಅಧಿಕಾರಿ ಆಗುವ ಕನಸ್ಸನ್ನು ಕಂಡಿದ್ದರು. ಆದರೆ ಇದಕ್ಕಾಗಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಸುಲಭವಲ್ಲ. ಅನೇಕ ಬಾರಿ ಪ್ರಯತ್ನಿಸಿ ವಿಫಲವಾಗಿದ್ದರೂ, ದೇವಯಾನಿ ಸಿಂಗ್ ಛಲ ಬಿಡಲಿಲ್ಲ. ದೇವಯಾನಿ ಸಿಂಗ್ ಅವರು 2015, 2016, 2017, 2019 ಮತ್ತು 2021 ರಲ್ಲಿ UPSC ಪರೀಕ್ಷೆಗೆ ಹಾಜರಾಗಿದ್ದರು.
ತನ್ನ ಮೊದಲ ಮತ್ತು ಎರಡನೇ ಪ್ರಯತ್ನದಲ್ಲಿ ದೇವಯಾನಿಗೆ ಪೂರ್ವ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ. 2019 ರ ಪರೀಕ್ಷೆಯಲ್ಲಿ 222 ನೇ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾದರು. ಆಗ ದೇವಯಾನಿ ಸಿಂಗ್ ಕೇಂದ್ರ ಲೆಕ್ಕ ಪರಿಶೋಧನಾ ಇಲಾಖೆಗೆ ಆಯ್ಕೆಯಾದರು.
IRS ದೇವಯಾನಿ ಸಿಂಗ್ ತನ್ನ 10 ನೇ ಮತ್ತು 12 ನೇ ತರಗತಿಯನ್ನು ಚಂಡೀಗಢದ SH ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಓದಿದ್ದಾರೆ. ಇದಾದ ನಂತರ 2014ರಲ್ಲಿ ಬಿಐಟಿಎಸ್ ಪಿಲಾನಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ಪದವಿ ಮುಗಿದ ಕೂಡಲೇ 2015ರಿಂದಲೇ UPSC ಪರೀಕ್ಷೆಗೆ ತಯಾರಿ ಆರಂಭಿಸಿದ್ದರು.ಅವರ ಪರಿಶ್ರಮದ ಆಧಾರದ ಮೇಲೆ ಮುಂದಿನ ಪ್ರಯತ್ನದಲ್ಲಿ 11ನೇ ರ್ಯಾಂಕ್ ಗಳಿಸಿದರು.. 2019 ರಲ್ಲಿ, ದೇವಯಾನಿ ಅವರು ರಾಜಸ್ಥಾನ ಸಿವಿಲ್ ಸೇವೆಗೆ ಆಯ್ಕೆಯಾದರು.