ಬೆಳಗಾವಿ,ಡಿ.15(DaijiworldNews/TA): ಕಣಬರಗಿ ಗ್ರಾಮದಲ್ಲಿ ಮಗುವನ್ನೇ ಹೆತ್ತ ತಾಯಿ ಕೆರೆಗೆ ಎಸೆದ ಅಮಾನವೀಯ ಘಟನೆ ನಡೆದಿದೆ. ಮಗುವಿಗೆ ಪಿಡ್ಸ್ ಬರುತ್ತೆ ಎಂಬ ಕಾರಣಕ್ಕ ಹೆತ್ತ ಎರಡು ತಿಂಗಳ ಹೆಣ್ಣು ಹಸುಗೂಸನ್ನು ತಾಯಿ ಕೆರೆಗೆ ಎಸೆದಿದ್ದಾಳೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಯಿ ಮಗುವನ್ನು ಕೆರೆಗೆ ಎಸೆಯುವುದನ್ನ ನೋಡಿದ ದನ,ಕರು ತೊಳೆಯುತ್ತಿದ್ದ ಯುವಕರು ತಕ್ಷಣವೇ ಕೆರೆಗೆ ಹಾರಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಮಗುವನ್ನ ರಕ್ಷಣೆ ಮಾಡಿ ಅವಳ ಕೈಗೆ ನೀಡಿದ್ದಾರೆ. ಬಳಿಕ ಬೆಳಗಾವಿ ನಗರದ ಚಿಕ್ಕ ಮಕ್ಕಳ ಖಾಸಗಿ ಆಸ್ಪತ್ರೆಗೆ ಮಗು ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಪರಿಶೀಲನೆ ನಡೆಸಿದ ಪೊಲೀಸರು ಬಳಿಕ ಆಸ್ಪತ್ರೆಗೆ ಹೋಗಿ ಮಗುವಿನ ಆರೋಗ್ಯದ ಕುರಿತು ವಿಚಾರಿಸಿ ಅಲ್ಲೇ ಇದ್ದ ತಾಯಿ ಶಾಂತಿಯನ್ನ ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಮಗುವಿಗೆ ನಿರಂತರವಾಗಿ ಪಿಡ್ಸ್ ಬರ್ತಿದ್ದು ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬರಲಾಗಿತ್ತು. ಮೊದಲ ಮಗನ ಎರಡನೇ ವರ್ಷದ ಹುಟ್ಟುಹಬ್ಬ ಕೂಡ ಇಂದೇ ಇದ್ದು ಇದೇ ದಿನ ಎರಡನೇ ಮಗನನ್ನ ಕೊಲ್ಲಲು ಯತ್ನಿಸಿದ್ದಾಗಿ ತಿಳಿದು ಬಂದಿದೆ.