ನವದೆಹಲಿ,ಡಿ.18(DaijiworldNews/TA):ದಲಿತ ಐಕಾನ್ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯು "ಗಾಯದ ಮೇಲೆ ಉಪ್ಪು" ಸವರಿದಂತಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ನಿಮ್ಮ ಗೃಹ ಸಚಿವರು ಸಂಸತ್ತಿನಲ್ಲಿ ಬಾಬಾ ಸಾಹೇಬರನ್ನು ಅವಮಾನಿಸಿದ ರೀತಿಗೆ ದೇಶ ಆಕ್ರೋಶಗೊಂಡಿದೆ. ಮತ್ತು ನಿಮ್ಮ ಹೇಳಿಕೆ ಗಾಯದ ಮೇಲೆ ಉಪ್ಪು ಎರಚಿದೆ ಎಂದಿದ್ದಾರೆ.
ಅಮಿತ್ ಶಾ ಜೀ, ಬಾಬಾ ಸಾಹೇಬರು ಈ ದೇಶದ ಪ್ರತಿ ಮಗುವಿಗೆ ದೇವರಿಗಿಂತ ಕಡಿಮೆಯಿಲ್ಲ, ನಮಗೆ ಸ್ವರ್ಗದ ಬಗ್ಗೆ ತಿಳಿದಿಲ್ಲ, ಆದರೆ ಬಾಬಾ ಸಾಹೇಬರ ಸಂವಿಧಾನವಿಲ್ಲದಿದ್ದರೆ, ನೀವು ದಮನಿತರನ್ನು ಮತ್ತು ದಲಿತರನ್ನು ಭೂಮಿಯ ಮೇಲೆ ಬದುಕಲು ಬಿಡುವುದಿಲ್ಲ" ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿಕೆ ನೀಡಿದ್ದಾರೆ.