ಹೈದರಾಬಾದ್, ಡಿ.19(DaijiworldNews/TA): ಟಾಲಿವುಡ್ ಚಿತ್ರ ಬಳಗಂ ಮೂಲಕ ಖ್ಯಾತಿ ಗಳಿಸಿದ್ದ ಜನಪ್ರಿಯ ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಕಿನ್ನೇರ ಮೊಗಿಲಯ್ಯ ಎಂದೂ ಕರೆಯಲ್ಪಡುವ ಮೊಗಿಲಯ್ಯ ಅವರು ಮೂತ್ರಪಿಂಡ ಕಾಯಿಲೆಯಿಂದ ವಾರಂಗಲ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. ಬಳಗಂ ನಿರ್ದೇಶಕ ವೇಣು ಮತ್ತು ಸಿಬ್ಬಂದಿ, ರಾಜ್ಯ ಸರ್ಕಾರವೂ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಿತ್ತು.
ಮೊಗಿಲಯ್ಯ ಅವರ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಬಂದಿದೆ. ಜೊತೆಗೆ ಜನಪದ ಕಲೆಗೆ ಅವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಸಹ ನೀಡಿದೆ. ಮುಗಿಲಯ್ಯ ನಿಧನಕ್ಕೆ ಸಚಿವ ಕೆಟಿಆರ್ ಸೇರಿದಂತೆ ಹಲವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.