ಶಿವಮೊಗ್ಗ, ಡಿ.21(DaijiworldNews/TA): ಟಿವಿ ರಿಮೋರ್ಟ್ ಕೊಡದ ಕಾರಣಕ್ಕೆ ಅಜ್ಜಿ ಬೈದಿದ್ದರಿಂದ ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೂಳೆಬೈಲಿನಲ್ಲಿ ನಡೆದಿದೆ. ಸಹನಾ(16) ಆತ್ಮಹತ್ಯೆಗೆ ಶರಣಾದ ಬಾಲಕಿ.
ಮೊದಲು ಟಿವಿ ರಿಮೋಟ್ಗಾಗಿ ಇಬ್ಬರು ಮಕ್ಕಳಿಂದ ಗಲಾಟೆ ಆರಂಭವಾಗಿದೆ. ಇದರಿಂದ ಅಜ್ಜಿ ಬಂದು ಮೊಮ್ಮಗಳಿಗೆ ಬೈದಿದ್ದಾರೆ. ಇದರಿಂದ ಮನನೊಂದ ಮೊಮ್ಮಗಳು ಸಹನಾ ಇಲಿ ಪಾಷಾಣ ಸೇವಿಸಿ ಪ್ರಾಣ ಬಿಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನಿವಾಸಿಯಾದ ಮೃತ ಬಾಲಕಿ ಸಹನಾ, ಅಜ್ಜಿ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎನ್ನಲಾಗಿದೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.