ಬೆಂಗಳೂರು,ಡಿ, 21(DaijiworldNews/AK): ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಪೊಲೀಸರು ನಡೆದುಕೊಂಡ ವರ್ತನೆ ಪ್ರಕರಣವನ್ನ ಸಿಬಿಐ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರಕ್ಕೆ ಆಗ್ರಹಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಟಿ ರವಿ ಕೇಸ್ನಲ್ಲಿ ಆಂಧ್ರ ಸಿನಿಮಾ ರಕ್ತ ಚರಿತ್ರೆ ಮಾಡೆಲ್ನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡಿದೆ. ವಿರೋಧ ಪಕ್ಷವನ್ನ ಟಾರ್ಗೆಟ್ ಮಾಡೋ ಕೆಲಸ ಶುರುವಾಗಿದೆ. ಆಂಧ್ರ ರಾಜಕೀಯ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಆಗೋ ಸ್ಥಿತಿ ನಿರ್ಮಾಣ ಆಗಿದೆ ಎಂದು ತಿಳಿಸಿದರು.
ಪೊಲೀಸರು ನಡೆದುಕೊಂಡಿರೋ ವರ್ತನೆ ಸಹಿಸಲು ಸಾಧ್ಯವಿಲ್ಲ. ಯಾರದ್ದೋ ಸೂಚನೆ ಮೇಲೆ ಪೊಲೀಸರು ಹೀಗೆ ನಡೆಸಿಕೊಂಡಿದ್ದಾರೆ. ಅವರು ಯಾರು ಅನ್ನೋದನ್ನ ಪತ್ತೆ ಹಚ್ಚಬೇಕು. ಈ ಹಿನ್ನೆಲೆಯಲ್ಲಿ ಸಿ.ಟಿ.ರವಿ ಕೇಸನ್ನ ಸಿಬಿಐಗೆ ಕೊಡಬೇಕು ಎಂದು ಅಶೋಕ್ ಆಗ್ರಹಿಸಿದರು.