ಚಿಕ್ಕಮಗಳೂರು, ಡಿ.22(DaijiworldNews/AA): ಜಾಮೀನು ಪಡೆದು ಸಿ.ಟಿ.ರವಿಯವರು ಜೈಲಿನಿಂದ ಹೊರಬಂದ ಬಳಿಕ ಅವರಿಗೆ ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಹಮ್ಮಿಕೊಂಡಿದ್ದರು. ಈ ವೇಳೆ ಆ್ಯಂಬುಲೆನ್ಸ್ಗಳನ್ನು ಬಳಕೆ ಮಾಡಿದ ಎಡವಟ್ಟಿನಿಂದಾಗಿ ಎಫ್ಐಆರ್ ದಾಖಲಾಗಿದೆ.

ಪೊಲೀಸ್ ಬಂಧನ, ಜಾಮೀನು ರದ್ಧಾಂತದ ಬಳಿಕ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರು ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನಿಂದ ಚಿಕ್ಕಮಗಳೂರಿನವರೆಗೂ ದಾರಿಯುದ್ಧಕ್ಕೂ ಕಾರ್ಯಕರ್ತರು ಮೆರವಣಿಗೆ, ಪುಷ್ಪಾರ್ಚನೆ ಮಾಡಿ ಅದ್ಧೂರಿ ಸ್ವಾಗತ ಕೋರಿದ್ದಾರೆ. ಅದರಲ್ಲೂ ಚಿಕ್ಕಮಗಳೂರಿನಲ್ಲಿ ಭರ್ಜರಿ ರೋಡ್ ಶೋ ಮಾಡಿದ್ದು, ಈ ವೇಳೆ ಆ್ಯಂಬುಲೆನ್ಸ್ಗಳನ್ನು ಬಳಕೆ ಮಾಡಲಾಗಿದೆ.
ಸಿ.ಟಿ.ರವಿ ಸ್ವಾಗತಕ್ಕೆ ಆ್ಯಂಬುಲೆನ್ಸ್ಗಳು ಸೈರನ್ ಹಾಕಿಕೊಂಡು ಬಂದಿವೆ. ಈ ಸಂಬಂಧ ಇದೀಗ 7 ಆ್ಯಂಬುಲೆನ್ಸ್ಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೋಗಿಗಳಲ್ಲಿದೆ ಸೈರನ್ ಹಾಕಿಕೊಂಡು ಹಾಗೂ ಟಾಪ್ನಲ್ಲಿ ಲೈಟ್ ಹಾಕಿಕೊಂಡು ಬಂದಿದ್ದ 7 ಆ್ಯಂಬ್ಯುಲೆನ್ಸ್ ಚಾಲಕ, ಮಾಲೀಕರ ವಿರುದ್ಧ ಇದೀಗ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.