ಚಂಡೀಗಢ, ಡಿ.27(DaijiworldNews/AK): 50 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್ ಸೇತುವೆಯ ಮೇಲಿಂದ ಚರಂಡಿಗೆ ಬಿದ್ದ ಪರಿಣಾಮ 8 ಜನ ಸ್ಥಳದಲ್ಲಿಯೇ ಸಾವು , 18ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಪಂಜಾಬ್ನ ಬತಿಂಡಾದಲ್ಲಿ ನಡೆದಿದೆ.

ಬಸ್ ಪಂಜಾಬ್ನ ಸರ್ದುಲ್ಗಢದಿಂದ ಬತಿಂಡಾಗೆ ತೆರಳುತ್ತಿತ್ತು. ಈ ವೇಳೆ ಜಿವಾನ್ ಸಿಂಗ್ ವಾಲಾ ಗ್ರಾಮದಲ್ಲಿ ಸೇತುವೆ ಮೇಲಿಂದ ಚರಂಡಿಗೆ ಬಿದ್ದಿದೆ.ಕೂಡಲೇ ಅಲ್ಲಿಯೇ ಇದ್ದ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ಜಿಲ್ಲಾಡಳಿತ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಯಿತು.ಈ ಪ್ರದೇಶದಲ್ಲಿ ಹವಾಮಾನ ವೈಪರೀತ್ಯವಿರುವ ಕಾರಣದಿಂದಾಗಿ ಈ ಅಪಘಾತ ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ