ಗಡ್ಡಿರೋಲಿ, ಜ.01 (DaijiworldNews/AA): ಮಹಾರಾಷ್ಟ್ರದಲ್ಲಿ ನಕ್ಸಲಿಸಂ ಅಂತ್ಯದ ಹೊಸ್ತಿಲಿಗೆ ಬಂದಿದೆ ಎಂದು ಸಿಎಂ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ನೇರವಾಗಿ ಗಡ್ಡಿರೋಲಿ ತಲುಪುವ ರಸ್ತೆಯನ್ನು ದೇವೇಂದ್ರ ಫಡ್ನವೀಸ್ ಅವರು ಇಂದು ಉದ್ಘಾಟಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ದೂರದ ಪ್ರದೇಶಗಳಲ್ಲಿ ನಕ್ಸಲರ ಪ್ರಾಬಲ್ಯ ಕೊನೆಯಾಗುತ್ತಿದೆ. ಉನ್ನತ ಮಟ್ಟದ ನಕ್ಸಲ್ ಕಾರ್ಯಕರ್ತರೇ ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸರಿಗೆ ಶರಣಾಗುತ್ತಿದ್ದಾರೆ. ಜೊತೆಗೆ ಹೊಸದಾಗಿ ಯಾರನ್ನೂ ನೇಮಕ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಮಹಾರಾಷ್ಟ್ರದಲ್ಲಿ ನಕ್ಸಲಿಸಂ ಕೊನೆಯಾಗುತ್ತಿದೆ ಎಂದಿದ್ದಾರೆ.
ಗಡ್ಡಿರೋಲಿ ಪ್ರದೇಶ ಸ್ವಾತಂತ್ರ್ಯ ದೊರೆತ 75 ವರ್ಷಗಳ ಬಳಿಕ ಎಂಎಸ್ಆರ್ಟಿಸಿ ಸರ್ಕಾರಿ ಬಸ್ ಸೌಲಭ್ಯವನ್ನು ಪಡೆದುಕೊಂಡಿದೆ ಎಂದು ಹೇಳಿದರು.
ಇನ್ನು ಮಹಾರಾಷ್ಟ್ರದ ಪೂರ್ವ ಗಡಿಯಲ್ಲಿರುವ ಗಡ್ಡಿರೋಲಿ ಜಿಲ್ಲೆಯಲ್ಲಿ ನಕ್ಸಲರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದರು. ಹೀಗಾಗಿ ಆ ಪ್ರದೇಶವನ್ನು ನಕ್ಸಲಿಸ್ ಮುಕ್ತ ಪ್ರದೇಶ ಮಾಡುವ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ ಕೈಗೆತ್ತಿಕೊಂಡಿದೆ.