ಹುಬ್ಬಳ್ಳಿ, ಜ.03 (DaijiworldNews/AA): ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಎಲ್ಲಾ ದರ ಏರಿಕೆ ಮಾಡಿ ಜನ ಸಾಮಾನ್ಯರ ನಿತ್ಯದ ಜೀವನಕ್ಕೆ ಕುತ್ತು ತಂದಿದೆ. ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವಿದ್ಯುತ್ ದರ, ಹಾಲಿನ ದರ, ಡೀಸೆಲ್, ಪೆಟ್ರೋಲ್ ದರ ರಾಜ್ಯದಲ್ಲಿ ಏರಿಕೆ ಮಾಡಿದ್ದಾರೆ. ಆಸ್ತಿ ನೋಂದಣಿ, ಮದ್ಯದ ದರ ಏರಿಕೆ ಮಾಡಿದ್ದರು. ಈಗ ಬಸ್ ದರ ಏರಿಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು ಮಹಾನಗರ ಪಾಲಿಕೆ ಧಾರವಾಡ ಜನರ ಆಸೆಯಾಗಿತ್ತು. ಜನರ ಆಸೆಗೆ ತಕ್ಕಂತೆ ವಿಭಜನೆಯಾಗಿದೆ. ನಮ್ಮ ಸರ್ಕಾರ ಇದ್ದಾಗಲೂ ಇದಕ್ಕೆ ಚಳುವಳಿ ಮಾಡಿದ್ದೆವು. ನಮ್ಮ ಸರ್ಕಾರದ ಬೆಂಬಲಯಿದೆ. ಹೊಸ ಪಾಲಿಕೆ ರಚನೆಯಿಂದ ಧಾರವಾಡ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.