ಹಾವೇರಿ, ಜ.05 (DaijiworldNews/AA): ಆಂಧ್ರ, ತಮಿಳುನಾಡಿನಲ್ಲಿ ನಮಗಿಂತ ದರ ಹೆಚ್ಚಿದೆ. ನಮ್ಮಲ್ಲಿಯೇ ಬಸ್ ಟಿಕೆಟ್ ದರ ಕಡಿಮೆ ಇದೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಹೋರಾಟ ಮಾಡೋದು ಬಿಟ್ಟರೆ ಏನು ಕೆಲಸ ಇದೆ ಹೇಳಿ? ಒಂದು ಸಲವಾದರೂ ಅಭಿವೃದ್ಧಿ ಬಗ್ಗೆ ಮಾತಾನಾಡುತ್ತಾರಾ? ಶಕ್ತಿ ಯೋಜನೆಯಲ್ಲಿ ಜನರನ್ನು ಓಡಾಡಿಸುತ್ತಿದ್ದೇವೆ ಅಂದರೆ ಅಟ್ ಲೀಸ್ಟ್ ನೋ ಪ್ರಾಫಿಟ್ ನೋ ಲಾಸ್ನಲ್ಲಿ ಆದರೂ ಉಳಿಸಬೇಕು ಎಂಬ ಉದ್ದೇಶ ಅಷ್ಟೇ. ಹೆಣ್ಣು ಮಕ್ಕಳಿಗೆ, ಬಡವರಿಗೆ ಏನು ಕೊಡಬೇಕೋ ಅದನ್ನು ಆದಷ್ಟು ಕೊಟ್ಟಿದ್ದೇವೆ ಎಂದು ಹೇಳಿದರು.
ದುಡಿಯುವ ಗಂಡಮಕ್ಕಳಿಗೆ 15% ಭಾರ ಆಗಬಹುದು. ನಾನು ಇಲ್ಲ ಅಂತ ಹೇಳಲ್ಲ. ಪ್ರತಿ ನಿತ್ಯ ಓಡಾಡುತ್ತಿರೋದು ಹೆಣ್ಣ ಮಕ್ಕಳೇ ಇದ್ದಾರೆ. ಗಂಡುಮಕ್ಕಳು ಓಡಾಡಲ್ಲ, ನೀವು ಉಲ್ಟಾ ಹೇಳುತ್ತಿದ್ದೀರಿ ಎಂದು ತಿಳಿಸಿದರು.
ಕಾಂಗ್ರೆಸ್ನಲ್ಲಿ ಪುನಃ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾರು ಸಿಎಂ ಇರಬೇಕು, ಡಿಸಿಎಂ ಇರಬೇಕು ಎಂಬುದನ್ನು ವರಿಷ್ಟರು ತೀರ್ಮಾನ ಮಾಡಬೇಕು. ಈ ಬಗ್ಗೆ ಸಿಎಲ್ಪಿನಲ್ಲಿ ನಿರ್ಣಯ ಆಗುತ್ತದೆ ಎಂದರು.