ಕೊಪ್ಪಳ, ಜ.06 (DaijiworldNews/AK): ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಅಡೂರು ಗ್ರಾಮದ ಬಾಣಂತಿ ಶ್ರೀಮತಿ ರೇಣುಕಾ ಹಿರೇಮನಿ ಎಂಬ ಸಂತ್ರಸ್ತೆ ಮನೆಗೆ ರಾಜ್ಯ ಸತ್ಯ ಶೋಧನಾ ಸಮಿತಿಯ ತಂಡ ಭೇಟಿ ಮಾಡಿ ಸಂತ್ರಸ್ತೆಯ ಗಂಡ ಹಾಗೂ ಕುಟುಂಬಸ್ಥರಿಂದ ಮನೆಯ ವಿವರ ಪಡೆಯಿತು.

ಸಮಿತಿಯ ಪ್ರಮುಖರಾದ ಶೈಲೇಂದ್ರ ಬೆಲ್ದಾಳೆ, ಕು. ಶ್ರೀ ಮಂಜುಳಾ, ಮುಖ್ಯ ಸಚೇತಕರಾದ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ವಿಧಾನಸಭೆ ಸದಸ್ಯ ಶ್ರೀಮತಿ ಹೇಮಲತಾ ನಾಯಕ್, ಡಾಕ್ಟರ್ ನಾರಾಯಣ್, ಡಾಕ್ಟರ್ ಅರುಣ, ವಿಜಯಲಕ್ಷ್ಮಿ ಕರೂರ, ಡಾಕ್ಟರ್ ಲಕ್ಷ್ಮಣ್, ರತನ್ ರಮೇಶ್ ಪೂಜಾರಿ, ಕೊಪ್ಪಳ ಜಿಲ್ಲಾ ಅಧ್ಯಕ್ಷ ನವೀನ್ ಗುಳಗಣ್ಣನವರ್ ಉಪಸ್ಥಿತರಿದ್ದರು.