ದಾವಣಗೆರೆ, ಜ.07 (DaijiworldNews/AK):ಪಶ್ಚಿಮ ಬಂಗಾಲದ ಔಷಧಿ ಕಂಪೆನಿಯಿಂದ ಸರಬರಾಜಾದ ಔಷಧಿ ಕಳಪೆ ಎಂದು ಡ್ರಗ್ ಕಂಟ್ರೋಲರ್ ಮಾಹಿತಿ ನೀಡಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ಶಾಸಕ ಚಂದ್ರು ಲಮಾಣಿ ಅವರು ಆಕ್ಷೇಪಿಸಿದರು.

ಬಿಜೆಪಿ ಸತ್ಯಶೋಧನ ಸಮಿತಿ ವತಿಯಿಂದ ಇಂದು ದಾವಣಗೆರೆ ಜಿಲ್ಲಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ದಾವಣಗೆರೆ ನಗರದ ಚಿಟಗೇರಿ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿದ ಶಾಸಕ ಚಂದ್ರು ಲಮಾಣಿ ಮತ್ತು ಸಮಿತಿಯ ಎಲ್ಲಾ ಸದಸ್ಯರು ಮಾಹಿತಿ ಪಡೆದರು. ಬಳಿಕ ಚಂದ್ರು ಲಮಾಣಿ ಅವರು ಮಾತನಾಡಿ, ಪರ್ಸೆಂಟೇಜ್ ಪಡೆದು ಈ ಔಷಧಿ ಬಳಸಲು ಅನುಮತಿ ನೀಡಿದ್ದಾರೆ.
ಈ ಕುರಿತು ಮೆಡಿಕಲ್ ಸೂಪರಿಂಟೆಂಡೆಂಟ್ ಅವರನ್ನು ಕೇಳಿದಾಗ, 21-2-2024ರಂದು ಪತ್ರ ಬರೆಯಲಾಗಿದೆ ಎಂದರು. ಪಶ್ಚಿಮ ಬಂಗಾಲದಿಂದ ಬಂದ ಆರ್.ಎಲ್.ಸಲೈನ್ ಸರಿ ಇಲ್ಲ ಎಂದು 11 ತಿಂಗಳ ಪತ್ರ ಬರೆದಿದ್ದರು. ಆದರೂ ಅದನ್ನೇ ಬಳಸಬೇಕೆಂಬ ಧೋರಣೆಯಿಂದ ಸರಕಾರ ನಡೆದುಕೊಂಡಿದೆ ಎಂದು ವಿವರಿಸಿದರು.ಈ ಔಷಧಿಯ ಬಾಟಲಿಯಲ್ಲಿ ಫಂಗಸ್ ಬೆಳವಣಿಗೆ ಕುರಿತು ವೈದ್ಯರು ಶಂಕೆಯನ್ನೂ ವ್ಯಕ್ತಪಡಿಸಿದ್ದರು ಎಂದು ಗಮನ ಸೆಳೆದರು.
ಪಶ್ಚಿಮ ಬಂಗಾಲದ ಈ ಔಷಧಿಯನ್ನು ರಾಜ್ಯದಾದ್ಯಂತ ಜಿಲ್ಲಾ, ತಾಲ್ಲೂಕು ಆಸ್ಪತ್ರೆ, ಪಿಎಚ್ಸಿಗಳಿಗೆ ಆಸ್ಪತ್ರೆಗಳಿಗೆ ಪೂರೈಸಿದ್ದರು ಎಂದು ವಿವರಿಸಿದರು.ಕಳೆದ ವರ್ಷ ಇಡೀ ವರ್ಷದಲ್ಲಿ ಸಿಜಿ ಆಸ್ಪತ್ರೆಯಲ್ಲಿ 21 ಬಾಣಂತಿಯರ ಸಾವಾಗಿದ್ದರೆ, ಈ ಬಾರಿ ಈಗಾಗಲೇ 33 ಸಾವು ಸಂಭವಿಸಿದೆ. ಇನ್ನೂ 4 ತಿಂಗಳು ಬಾಕಿ ಇದೆ. ಇದು ಅತ್ಯಂತ ಕಳವಳಕಾರಿ ಎಂದು ಹೇಳಿದರು. ಸೆಪ್ಟಿಕ್ ಶಾಕ್ ಎಂದೇ ಹೆಚ್ಚಿನ ಸಾವಿನಲ್ಲಿ ಕಂಡುಬಂದಿದೆ ಎಂದು ವಿವರ ನೀಡಿದರು.
ಸಲೈನ್ ವಿಷಯುಕ್ತವಾಗಿದ್ದರೆ, ರಕ್ತನಾಳಗಳು ಗಟ್ಟಿಯಾಗುತ್ತವೆ. ಅಂಥದ್ದೇ ಪ್ರಕರಣ ಕಂಡುಬಂದಿದೆ ಎಂದು ತಿಳಿಸಿದರು.ಪಶ್ಚಿಮ ಬಂಗಾಲದ ಔಷಧಿ ಕಂಪೆನಿಯಿಂದ ಸರಬರಾಜಾದ ಔಷಧಿ ಕಳಪೆ ಎಂದು ಡ್ರಗ್ ಕಂಟ್ರೋಲರ್ ಮಾಹಿತಿ ನೀಡಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ಶಾಸಕ ಚಂದ್ರು ಲಮಾಣಿ ಅವರು ಆಕ್ಷೇಪಿಸಿದರು.
ಬಿಜೆಪಿ ಸತ್ಯಶೋಧನ ಸಮಿತಿ ವತಿಯಿಂದ ಇಂದು ದಾವಣಗೆರೆ ಜಿಲ್ಲಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ದಾವಣಗೆರೆ ನಗರದ ಚಿಟಗೇರಿ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿದ ಶಾಸಕ ಚಂದ್ರು ಲಮಾಣಿ ಮತ್ತು ಸಮಿತಿಯ ಎಲ್ಲಾ ಸದಸ್ಯರು ಮಾಹಿತಿ ಪಡೆದರು. ಬಳಿಕ ಚಂದ್ರು ಲಮಾಣಿ ಅವರು ಮಾತನಾಡಿ, ಪರ್ಸೆಂಟೇಜ್ ಪಡೆದು ಈ ಔಷಧಿ ಬಳಸಲು ಅನುಮತಿ ನೀಡಿದ್ದಾರೆ. ಈ ಕುರಿತು ಮೆಡಿಕಲ್ ಸೂಪರಿಂಟೆಂಡೆಂಟ್ ಅವರನ್ನು ಕೇಳಿದಾಗ, 21-2-2024ರಂದು ಪತ್ರ ಬರೆಯಲಾಗಿದೆ ಎಂದರು. ಪಶ್ಚಿಮ ಬಂಗಾಲದಿಂದ ಬಂದ ಆರ್.ಎಲ್.ಸಲೈನ್ ಸರಿ ಇಲ್ಲ ಎಂದು 11 ತಿಂಗಳ ಪತ್ರ ಬರೆದಿದ್ದರು. ಆದರೂ ಅದನ್ನೇ ಬಳಸಬೇಕೆಂಬ ಧೋರಣೆಯಿಂದ ಸರಕಾರ ನಡೆದುಕೊಂಡಿದೆ ಎಂದು ವಿವರಿಸಿದರು.