ಶಬರಿಮಲೆ, ಜ.14(DaijiworldNews/TA): 2025ರ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ, ಶಬರಿಮಲೆ ದೇವಸ್ಥಾನದಲ್ಲಿ ಲಕ್ಷಾಂತರ ಭಕ್ತರು ಶ್ರೀ ಅಯ್ಯಪ್ಪ ದೇವರನ್ನು ಪೂಜಿಸುವುದರ ಜೊತೆಗೆ ಮಕರ ಜ್ಯೋತಿ ದರ್ಶನವನ್ನು ಪಡೆದು ಪುಣಿತರಾದರು. ಸಂಜೆ 6:44ಕ್ಕೆ ಅಯ್ಯಪ್ಪ ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಜ್ಯೋತಿ ದರ್ಶನವಾಯಿತು.
ವಿಶೇಷ ದಿನದಲ್ಲಿ, ಭಕ್ತರು ಬೆಟ್ಟದ ಮೇಲಿರುವ ದೇವಸ್ಥಾನದ ಹೊರಗೊಮ್ಮಲುಗಳ ಬಳಿ ಪವಿತ್ರ ಮಕರ ಜ್ಯೋತಿಯ ದರ್ಶನವನ್ನು ಪಡೆಯಲು ಕಾತುರದಿಂದ ಕಾಯುತ್ತಿದ್ದು ಮುಸ್ಸಂಜೆ ವೇಳೆಗೆ ಜ್ಯೋತಿ ದರ್ಶನ ಪಡೆದರು. ಪವಿತ್ರ ಬೆಳಕನ್ನು ನೋಡಲು ಲಕ್ಷಾಂತರ ಭಕ್ತರು 48 ದಿನಗಳ ಕಠಿಣ ವೃತದ ಬಳಿಕ ದೇಗುಲದಲ್ಲಿ ಬಂದು ಸೇರಿದ್ದರು.
ಭಕ್ತರಿಗೆ ಶಬರಿಮಲೆಯ ಪವಿತ್ರ ದರ್ಶನವು ಆಧ್ಯಾತ್ಮಿಕ ಸಂತೋಷ ಮತ್ತು ಆಶೀರ್ವಾದಗಳನ್ನು ನೀಡುವ ಸುಮಧುರ ಕ್ಷಣವಾಗಿದೆ. ಈ ವೇಳೆ ಭಕ್ತ ಸಮೂಹದ ನಿರ್ವಹಣೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದೇವಾಲಯ ಮತ್ತು ಅದರ ಸುತ್ತಮುತ್ತ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
ಮಕರ ಜ್ಯೋತಿ: ಮಕರ ಜ್ಯೋತಿ ಎಂದರೆ, ಪವಿತ್ರ ಬೆಳಕು ಎಂದು ಹೇಳಲಾಗುತ್ತದೆ, ಅದು ಶಬರಿಮಲೆ ದೇವಾಲಯದ ಪವಿತ್ರ ಸ್ಥಳದಲ್ಲಿ ಕಾಣಿಸಲ್ಪಡುವುದು. ಈ ಬೆಳಕು ದೈವಿಕ ಪ್ರಮಾಣವಲ್ಲದೆ, ನಂಬಿಕೆಗಳು ಮತ್ತು ಪ್ರಾರ್ಥನೆಗಳನ್ನು ಕುರಿತಾದ ಸ್ಥಳೀಯ ಆಧ್ಯಾತ್ಮಿಕ ವಿಚಾರಧಾರೆಯನ್ನು ಹೊಂದಿದೆ.