ಹೈದರಾಬಾದ್, ಜ.23(DaijiworldNews/TA): ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಪ್ರೆಶರ್ ಕುಕ್ಕರ್ನಲ್ಲಿ ಕುದಿಸಿ ಅಪರಾಧವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
45 ವರ್ಷದ ಗುರು ಮೂರ್ತಿ ಎಂಬ ವ್ಯಕ್ತಿ, ತನ್ನ ಪತ್ನಿ ನಾಪತ್ತೆಯಾದ ನಂತರ ಪೊಲೀಸ್ ತನಿಖೆಯ ಸಮಯದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾನೆ. ಆರೋಪಗಳನ್ನು ಪರಿಶೀಲಿಸಲಾಗುತ್ತಿದೆ. 35 ವರ್ಷದ ವೆಂಕಟ ಮಾಧವಿ ನಾಪತ್ತೆಯಾಗಿದ್ದಾರೆ ಎಂದು ಕುಟುಂಬವು ಜನವರಿ 16ರಂದು ವರದಿ ಮಾಡಿತ್ತು. ಪೊಲೀಸರು ತನಿಖೆ ಆರಂಭಿಸಿದಾಗ, ಅವರಿಗೆ ಗಂಡನ ಬಗ್ಗೆ ಅನುಮಾನವಿತ್ತು. ಆತನನ್ನು ಪ್ರಶ್ನಿಸಿದಾಗ, ಆ ವ್ಯಕ್ತಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ವರದಿಯ ಪ್ರಕಾರ, ಆರೋಪಿ ದೇಹವನ್ನು ಸ್ನಾನಗೃಹದಲ್ಲಿ ಕತ್ತರಿಸಿ ಭಾಗಗಳನ್ನು ಪ್ರೆಶರ್ ಕುಕ್ಕರ್ನಲ್ಲಿ ಬೇಯಿಸಿದ್ದಾನೆ. ನಂತರ ಮೂಳೆಗಳನ್ನು ಬೇರ್ಪಡಿಸಿ, ಕುಟ್ಟಾಣಿ ಬಳಸಿ ಪುಡಿಮಾಡಿ ಮತ್ತೆ ಬೇಯಿಸಿದ್ದಾನೆ. ಮೂರು ದಿನಗಳ ಕಾಲ ಅಡುಗೆ ಪ್ರಕ್ರಿಯೆಯಲ್ಲಿ ಆತ ತೊಡಗಿದ್ದು ನಂತರ ಆರೋಪಿ ಅವುಗಳನ್ನು ಪ್ಯಾಕ್ ಮಾಡಿ ಮೀರ್ಪೇಟ್ ಸರೋವರಕ್ಕೆ ಎಸೆದಿದ್ದಾನೆ ಎಂದು ವರದಿಯಾಗಿದೆ. ಆರೋಪಿಯನ್ನು ಮಾಜಿ ಸೈನಿಕ ಗುರು ಮೂರ್ತಿ ಎಂದು ಹೇಳಲಾಗಿದೆ. ಪ್ರಸ್ತುತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.
ಈ ದಂಪತಿಗೆ ಒಂದು ಹುಡುಗ ಒಂದು ಹುಡುಗಿ ಇಬ್ಬರು ಮಕ್ಕಳಿದ್ದಾರೆ. ವರದಿಯ ಪ್ರಕಾರ, ಈ ಜೋಡಿಯು ಆಗಾಗ್ಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಹತ್ಯೆ ಯಾಕೆ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.