ನವದೆಹಲಿ,ಜ.25 (DaijiworldNews/AK): ದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿಯ ‘ವಿಕಸಿತ್ ದೆಹಲಿ ಸಂಕಲ್ಪ ಪತ್ರ’ದ ಮೂರನೇ ಮತ್ತು ಅಂತಿಮ ಭಾಗವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾವರಣಗೊಳಿಸಿದ್ದಾರೆ.

ಈ ಪ್ರಣಾಳಿಕೆಯು ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿಯ ದೃಷ್ಟಿಕೋನ ಮತ್ತು ಪ್ರಮುಖ ಭರವಸೆಗಳನ್ನು ವಿವರಿಸುತ್ತದೆ. “ಬಿಜೆಪಿಗೆ ಚುನಾವಣೆ ಪ್ರಣಾಳಿಕೆಯು ನಂಬಿಕೆಯ ವಿಷಯವಾಗಿದೆಯೇ ವಿನಃ ಖಾಲಿ ಭರವಸೆಗಳಲ್ಲ ಎಂದು ಹೇಳುವ ಮೂಲಕ ಅಮಿತ್ ಶಾ ಪ್ರಣಾಳಿಕೆಯ ವಿಶ್ವಾಸಾರ್ಹತೆಯನ್ನು ಒತ್ತಿ ಹೇಳಿದ್ದಾರೆ.
1.8 ಲಕ್ಷ ವ್ಯಕ್ತಿಗಳು ಮತ್ತು 62,000 ಗುಂಪುಗಳ ಇನ್ಪುಟ್ಗಳ ಆಧಾರದ ಮೇಲೆ ದಾಖಲೆಯನ್ನು ಸಿದ್ಧಪಡಿಸಲಾಗಿದೆ ಎಂದು ಅಮಿತ್ ಶಾ ಬಹಿರಂಗಪಡಿಸಿದ್ದಾರೆ. ಇದು ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ.ಚುನಾವಣೆಯ ಸಮಯದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಮತದಾರರನ್ನು ದಾರಿ ತಪ್ಪಿಸಿದ್ದಕ್ಕಾಗಿ ಅಮಿತ್ ಶಾ ತಮ್ಮ ಭಾಷಣದಲ್ಲಿ ಟೀಕಿಸಿದ್ದಾರೆ.