ನವದೆಹಲಿ, ಜ.26(DaijiworldNews/TA): ಕರ್ತವ್ಯ ಪಥದಲ್ಲಿ 76 ನೇ ಗಣರಾಜ್ಯೋತ್ಸವ ಆಚರಣೆಯ ಅಧ್ಯಕ್ಷತೆಯನ್ನು ವಹಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸಿದರು.
ಅವರೊಂದಿಗೆ ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಇದ್ದರು. ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಮೋದಿ ತೆರಳಿ ಇಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮತ್ತು ಅವರ ಪತ್ನಿ ಸುದೇಶ್ ಧನ್ಕರ್ ಅವರನ್ನು ಪ್ರಧಾನಮಂತ್ರಿಯವರು ಕರ್ತವ್ಯ ಪಥದಲ್ಲಿ ಸ್ವಾಗತಿಸಿದರು. ರಾಷ್ಟ್ರಗೀತೆಯ ಗಾಯನದ ನಡುವೆ ರಾಷ್ಟ್ರಧ್ವಜವನ್ನು ಹಾರಿಸಲಾಯಿತು, ನಂತರ ಸ್ಥಳೀಯ 105-ಎಂಎಂ ಲೈಟ್ ಫೀಲ್ಡ್ ಗನ್ಗಳನ್ನು ಬಳಸಿಕೊಂಡು 21-ಗನ್ ಸೆಲ್ಯೂಟ್ ಮಾಡಲಾಯಿತು. ನಂತರ ಗತ್ತು ಗಾಂಭೀರ್ಯದ ಅನೇಕ ಸಾಂಸ್ಕೃತಿಕ ವೈಭವ ಪ್ರದರ್ಶನಗೊಂಡವು.