ಬೆಂಗಳೂರು, ಜ.28 (DaijiworldNews/AA): ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆಗೆ ನಾವು ಒತ್ತಡ ಹಾಕಲ್ಲ. ಪಕ್ಷ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಮಾಡ್ತೇವೆ ಎಂದು ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

ವಿಧಾನಸೌಧದಲ್ಲಿ ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂಬ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆಗೆ ನಾವು ಒತ್ತಡ ಹಾಕಲ್ಲ. ಪಕ್ಷ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಮಾಡ್ತೇವೆ. ರಾಜಕಾರಣ ನಿಂತ ನೀರಲ್ಲ. ಹಾಗೆಯೇ ಮೇಲಿನಿಂದ ಹರಿಯುವ ನೀರನ್ನು ಕೆಳಗೆ ನಿಂತು ನೋಡಲು ಆಗುವುದಿಲ್ಲ ಎಂದರು.
ಶಾಸಕರಿಗೆ ಅನುದಾನ ಬಿಡುಗಡೆ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶಾಸಕರು ಕೇಳುತ್ತಾ ಇರೋದು ನ್ಯಾಯ ಸಮ್ಮತವಾಗಿಯೇ ಇದೆ. ಶಾಸಕರು ಅವರ ಮನೆಗೆ ಏನೂ ಅನುದಾನ ಕೇಳ್ತಿಲ್ಲ. ಹಂತ-ಹಂತವಾಗಿ ಅವರಿಗೆ ಅನುದಾನ ಬಿಡುಗಡೆ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಹೇಳಿದರು.
ಸಿಎಂ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್ಗೆ ಇಡಿ ನೋಟಿಸ್ ಸಂಬಂಧ ಮಾತನಾಡಿದ ಅವರು, ಇಡಿ ನೋಟಿಸ್ ರಾಜಕೀಯ ಪ್ರೇರಿತವಾಗಿದೆ. ನೋಟಿಸ್ ಕೊಟ್ಟಿರುವ ಸತ್ಯಾಸತ್ಯತೆ ವಿಚಾರ ಕೋರ್ಟ್ ಮುಂದೆ ಬಂದಿದೆ. ಕೋರ್ಟ್ನಲ್ಲಿರುವ ವಿಚಾರದ ಬಗ್ಗೆ ನಾನು ಈಗಲೇ ಏನೂ ಮಾತಾಡಲ್ಲ ಎಂದರು.