ಕೋಲಾರ, ಜ.31 (DaijiworldNews/AA): ಮೊಬೈಲ್ನಲ್ಲಿ ರೀಲ್ಸ್ ನೋಡುತ್ತಲೇ ಬಸ್ ಚಾಲನೆ ಮಾಡಿದ್ದ ಚಾಲಕನನ್ನು ಅಮಾನತು ಮಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಆದೇಶಿಸಿದ್ದಾರೆ.

ಶ್ರೀನಿವಾಸ್ ಅಮಾನತ್ತಾದ ಸರ್ಕಾರಿ ಬಸ್ ಚಾಲಕ.
ಈ ಘಟನೆ ಕೋಲಾರದಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿತ್ತು.
ಕೋಲಾರದಿಂದ ಪಾವಗಡ ಮಾರ್ಗದ ಬಸ್ ಚಾಲಕ ಈ ರೀತಿ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ಬಸ್ನಲ್ಲಿ ಹತ್ತಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರೂ, ಸರ್ಕಾರಿ ಬಸ್ ಚಾಲಕ ನಿರ್ಲಕ್ಷ್ಯದಿಂದ ರೀಲ್ಸ್ ನೋಡುತ್ತಾ ಬಸ್ ಚಲಾಯಿಸುತ್ತಿದ್ದವರ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಚಾಲಕ ರೀಲ್ಸ್ ನೋಡುತ್ತ ಬಸ್ ಚಲಾಯಿಸುತ್ತಿರುವುದನ್ನು ಪ್ರಯಾಣಿಕರೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.